ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯಲ್ಲಿ ಎನ್ ಸಿಬಿ ಅಧಿಕಾರಿಗಳು ನಿರಂತರ ತನಿಖೆ ಕೈಗೊಂಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರತಿದೆ.
ಮೈಸೂರು ಭಾಗದ ಓರ್ವ ಶಾಸಕರ ಪುತ್ರ ಹಾಗೂ ಉತ್ತರ ಕರ್ನಾಟಕ ಭಾಗದ ಮತ್ತೋರ್ವ ಶಾಸಕರ ಪುತ್ರನ ವಿರುದ್ಧ ಡ್ರಗ್ಸ್ ಸೇವನೆ ಆರೋಪ ಕೇಳಿಬಂದಿದೆ. ಇಬ್ಬರು ತಾವು ಮಾತ್ರವಲ್ಲದೆ ತಮ್ಮದೆಯಾದ ಗುಂಪು ಕಟ್ಟಿಕೊಂಡು ಡ್ರಗ್ಸ್ ಸೇವೆನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರ ವಿಚಾರಣೆ ಮತ್ತು ತನಿಖೆಗೆ ಮುಂದಾಗಿದ್ದು, ಸೂಕ್ತ ಸಾಕ್ಷಾಧಾರ ದೊರೆತ ಬಳಿಕ ಸರ್ಚ್ವಾರೆಂಟ್ ಪಡೆದು ನಂತರ ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗಿದೆ.