Breaking News

ಭಿಕ್ಷುಕನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವಾಗ ಕಂತೆ ಕಂತೆ ಹಣ ಪತ್ತೆ

Spread the love

ಬೆಂಗಳೂರು: ಅಂಗವಿಕಲ ಭಿಕ್ಷುಕನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವಾಗ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರತಿದಿನ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಂಗವಿಕಲ ರಂಗಸ್ವಾಮಯ್ಯ ಬಳಿ ಹಣ ಪತ್ತೆಯಾಗಿದೆ. ರಂಗಸ್ವಾಮಯ್ಯ ಭಿಕ್ಷೆ ಬೇಡಿದ ಹಣ ಹಾಗೂ ಅಂಗವಿಕಲ ವೇತನವನ್ನೂ ಬಳಸದೆ ಹಣವನ್ನು ಕೂಡಿಟ್ಟಿದ್ದು, ಸುಮಾರು 60 ಸಾವಿರ ರೂ. ಗಂಟಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಹಲವು ತಿಂಗಳುಗಳಿಂದ ಸಾನ್ನವಿಲ್ಲದೇ ಕೊಳಕು, ಹರಿದ ಬಟ್ಟೆಯಲ್ಲಿಯೇ ಜೀವನ ನಡೆಸುತ್ತಿದ್ದ ಅವರನ್ನು ಗ್ರಾಮಸ್ಥರು ಸ್ವಚ್ಛ ಮಾಡಲು ತೆರಳಿದ್ದ ವೇಳೆ ಹಣ ಪತ್ತೆಯಾಗಿತ್ತು. ಇಷ್ಟು ದಿನ ಗ್ರಾಮಸ್ಥರು ಆತನಿಗೆ ಊಟ ನೀಡುತ್ತಿದ್ದರು. ಸದ್ಯ ರಂಗಸ್ವಾಮಯ್ಯನ ಹಣವನ್ನು ಗ್ರಾಮಸ್ಥರು ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಹಣ ದುರ್ಬಳಕೆ ಆಗುವುದನ್ನು ತಡೆಯುವ ಚಿಂತನೆ ನಡೆಸಿದ್ದಾರೆ. ಅಲ್ಲದೇ ಅನಾಥಾಶ್ರಮಕ್ಕೆ ಸೇರಿಸುವ ಯೋಚನೆಯನ್ನು ಮಾಡಿದ್ದಾರೆ.


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ