ಬೆಂಗಳೂರು: ವಿಶ್ವದಾದ್ಯಂತ ಹರಡಿರುವ ಕೊರೊನಾ ಸೋಂಕು ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಗ್ರಾಮಸ್ಥರು, ನಾಗರಿಕರು ಹೋಮ ಹವನ ನಡೆಸಿದ್ದಾರೆ.ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ಪೂಜೆ ಕೈಗೊಂಡು, ರುದ್ರ ಮಂತ್ರ ಎಲ್ಲ ಔಷಧೀಯ, ಲಸಿಕೆಯ ಒಡೆಯನಿಗೆ ಶಾಂತಿ ಕೈಗೊಂಡಿದ್ದಾರೆ. ಉಷ್ಣಾಂಶದಿಂದ ಕ್ರಿಮಿಗಳ ನಾಶ 25 ಜನರ ಋತ್ವಿಕರಿಂದ ಹೋಮ ಹವನ ನಡೆಸಲಾಯಿತು.
ವೇದ ಬ್ರಹ್ಮ ಶ್ರೀ ಸಂಪಿಗೆ ಶ್ರೀನಿವಾಸಮೂರ್ತಿ ಅರ್ಚಕರ ತಂಡದಿಂದ ಹೋಮದ ಪೂಜಾ ಕೈಂಕರ್ಯ ನಡೆದಿದೆ. ಗ್ರಾಮದ ಭವಾನಿ ಶಂಕರ್ ಮನೆತನದಿಂದ ಪೂಜೆ ನಡೆಸಲಾಗಿದೆ. ಇಸ್ಕಾನ್ ದೇವಾಲಯದ ಅರ್ಚಕರಿಂದ ಶ್ರೀಕೃಷ್ಣನ ಸ್ಮರಣೆ, ರುದ್ರಯಾಗದ ಮೂಲಕ ಮಾಹಾಮಾರಿ ಕೊರೊನಾ ನಿವಾರಣೆಗೆ ಪ್ರಾರ್ಥಿಸಲಾಯಿತು.
ಪೂಜೆಯಲ್ಲಿ ಶಿವಾನಂದ ಮಠದ ರಮಾಣಾನಂದ ಸ್ವಾಮೀಜಿ, ಭವಾನಿ ಶಂಕರ್ ಬೈರೇಗೌಡ, ಮಂಜುನಾಥ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ ಇನ್ನಿತರರು ಭಾಗಿಯಾಗಿದ್ದರು. ಈ ವೇಳೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಹಲವಾರು ಧಾರ್ಮಿಕ ಕಾರ್ಯ ನಡೆದವು.
Laxmi News 24×7