Breaking News

ಸತತ ಪ್ರಯತ್ನ ಹಾಗೂ ಓದುವ ಹವ್ಯಾಸ ರೂಪಿಸಿಕೊಂಡೆರೆ   ಯಶಸ್ಸು ಕಟ್ಟಿಟ್ಟ ಬುತ್ತಿ

Spread the love

ಕಾಗವಾಡ :  ಸತತ ಪ್ರಯತ್ನ ಹಾಗೂ ಓದುವ ಹವ್ಯಾಸ ರೂಪಿಸಿಕೊಂಡೆರೆ   ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ನಿರೂಪಿಸಿದ್ದಾಳೆ.  ಇಂಗ್ಲೀಷ ಮಾಧ್ಯಮದಲ್ಲಿ 625 ಕ್ಕೆ 604 ಅಂಕ ಗಳಿಸಿ  ಅಥಣಿ ಕಿತ್ತೂರ ರಾಣಿ ಚನ್ನಮ್ನ ವಸತಿ ಶಾಲೆಗೆ ಪ್ರಥಮ‌ ಸ್ಥಾನ ಪಡೆಯುವ ಮೂಲಕ  ಪೋಷಕರ ಹಾಗೂ  ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 604 ಅಂಕ ಪಡೆದು 96.64 % ರಷ್ಟು ಅಂಕಗಳಿಸಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ದೀಪಾ ಭಡಕೆ ಕನ್ನಡ ವಿಷಯದಲ್ಲಿ 122, ಇಂಗ್ಲಿಷ್ 99, ಹಿಂದಿ 100, ವಿಜ್ಞಾನ 93, ಗಣಿತ 92 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾಳೆ. ವಿದ್ಯಾರ್ಥಿಯ ಮನೆಯಲ್ಲಿ ಕಟುಂಬಸ್ಥರಿಂದ ಸಂತೋಷ ಪಾರವೇ ಇಲ್ಲ

ಒಟ್ಟಾರೆಯಾಗಿ ಸಾಧಿಸುವ ಛಲವೊಂದಿದ್ದರೆ ಏನಬೇಕಾದರೂ ಸಾಧಿಸಬಹುದು ಇದಕ್ಕೆ ಬಡತನ ಸಿರಿತನ ಮುಖ್ಯವಲ್ಲ ಓದುವ ಹಂಬಲ, ಮನಸ್ಸು ಬೇಕು ಎನ್ನುವುದನ್ನು ಪೂಜಾ ಭಡಕೆ ತೋರಿಸಿಕೊಟ್ಟಿದ್ದಾಳೆ.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ