Breaking News

ಪ್ರವಾಹ ನಿಯಂತ್ರಣಕ್ಕೆ 5 ಪರಿಹಾರ ಕೇಂದ್ರಗಳ ಪ್ರಾರಂಭ, 25 ಬೋಟ್​ ವ್ಯವಸ್ಥೆ: ಬೆಳಗಾವಿ ಡಿ.ಸಿ

Spread the love

ಬೆಳಗಾವಿ: ಕಳೆದ ಬಾರಿ ಪ್ರವಾಹದ ಹಿನ್ನೆಲೆ ನಮಗೆ ಅನುಭವ ಇದೆ. ಹೀಗಾಗಿ ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ್​ ತಿಳಿಸಿದ್ದಾರೆ.

ಗ್ರಾಮ, ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸದ್ಯ ಕೃಷ್ಣಾ ನದಿಯಲ್ಲಿ 1 ಲಕ್ಷ 55 ಸಾವಿರ ಕ್ಯೂಸೆಕ್​​​ ಒಳಹರಿವು ಇದ್ದು, ಅದು 2.5ಲಕ್ಷ ಕ್ಯೂಸೆಕ್​​​ಗೆ ಏರಿಕೆಯಾದ್ರೆ ಮಾತ್ರ ಜಮೀನು- ಮನೆಗೆ ನೀರು ನುಗ್ಗುವ ಆತಂಕ ಇದೆ. ಆದ್ದರಿಂದಾಗಿ ನದಿ ತೀರದ ಹಳ್ಳಿಗಳಲ್ಲಿ‌ ಜನ ಜಾನುವಾರಗಳ ರಕ್ಷಣೆ ಸಿದ್ಧತೆ ಕೈಗೊಂಡಿದ್ದು, ಇದರ ಕುರಿತು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ನಿಪ್ಪಾಣಿಯಲ್ಲಿ 5 ಪರಿಹಾರ ಕೇಂದ್ರಗಳನ್ನು ಪ್ರಾರಂಭ ಮಾಡಿದ್ದೇವೆ.. ಹಾಗೂ ಎನ್​​ಡಿಆರ್​ಎಫ್, ಎಸ್​​ಡಿಆರ್​​ಎಫ್ ತಂಡಗಳೂ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.

  • ಅಥಣಿ ತಾಲೂಕಿನಲ್ಲಿ 25 ಬೋಟ್​ಗಳ ವ್ಯವಸ್ಧೆ ಮಾಡಿಕೊಳ್ಳಲಾಗಿದ್ದು, ನದಿ ನೀರಿನ ಮಟ್ಟ ಏರಿದ್ರೆ ಪ್ರತಿ ಹಳ್ಳಿಯಲ್ಲಿ ಡಂಗೂರ ಸಾರ‌ಲು ವ್ಯವಸ್ಥೆ ಮಾಡೊಕೊಂಡಿದ್ದೇವೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ನಿಂದ ನೀರು ಬಿಡುವ ಕುರಿತು ಅಲ್ಲಿಯ ಜಿಲ್ಲಾಧಿಕಾರಿ ಜೊತೆ ನಾನೇ ಖುದ್ದು ಸಂಪರ್ಕದಲ್ಲಿದ್ದೇನೆ. ಫೋನ್ ಸಂಪರ್ಕ ಮಾಡಿ ನೀರಿನ ಬಿಡುಗಡೆ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಪ್ರವಾಹದ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ ಎಂದು ಹಿರೇಮಠ ಅವರು ತಿಳಿಸಿದರು.

Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ