Breaking News

ವೀಕೆಂಡ್​ ಬಂತು‌ ಅಂದ್ರೆ ಈ ಏರಿಯಾದಲ್ಲಿ ನೈಟ್ ಪಾರ್ಟಿ; ನೈಜೀರಿಯಾ ಪ್ರಜೆಗಳಿಂದ ಬೇಸತ್ತು ಹೋಗಿರುವ ಜನ

Spread the love

ಬೆಂಗಳೂರು(): ವಿದೇಶಗಳಿಂದ ಭಾರತಕ್ಕೆ ಯಾರೇ ಬಂದ್ರೂ ಅತಿಥಿ ದೇವೋ ಭವ ಅಂತ ನಮ್ಮವರು ನಡೆಸಿಕೊಳ್ತಾರೆ. ಅದರಲ್ಲೂ ಕರ್ನಾಟಕದ ಮಂದಿ ಬಂದವರ ಜೊತೆ ಬೆರೆತು ಹೋಗ್ತಾರೆ. ಅಂತಹ ಕನ್ನಡಿಗರ ಕಣ್ಣಿಗೆ ಒಂದಷ್ಟು ವಿದೇಶಿಯರು ಈಗ ವಿಲನ್​ಗಳಾಗಿದ್ದಾರೆ. ಅರೇ ಯಾರವರು ಅಂತೀರಾ ಸ್ಟೋರಿ ಓದಿ.

ವೀಕೆಂಡ್​ ಬಂತು‌ ಅಂದ್ರೆ ಈ ಏರಿಯಾದಲ್ಲಿ ನೈಟ್ ಪಾರ್ಟಿ; ನೈಜೀರಿಯಾ ಪ್ರಜೆಗಳಿಂದ ಬೇಸತ್ತು ಹೋಗಿರುವ ಜನರು
ಹೌದು,  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನೈಜಿರಿಯನ್ ಪ್ರಜೆಗಳ ಕಿರಿಕ್ ಇದೇನು ಮೊದಲೇನಲ್ಲ.‌ ಸದಾ ಒಂದಿಲ್ಲೊಂದು ಕಿರಿಕ್ ಮಾಡ್ತಾನೆ ಇರ್ತಾರೆ. ಆದ್ರೆ ಇವ್ರ ಕಿರಿಕ್ ನ್ನು ಪದೇ ಪದೇ ಸಹಿಸಿಕೊಳ್ಳುತ್ತಿದ್ದ ರಾಜಧಾನಿ ಜನರು ಈಗ ತಿರುಗಿ ಬಿದ್ದಿದ್ದಾರೆ. ಹೌದು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಣ್ಣ ಬಡಾವಣೆಯಲ್ಲಿ ವೀಕೆಂಡ್ ಆದ್ರೆ ಸಾಕು ನೈಜೀರಿಯಾ ಪ್ರಜೆಗಳ ಅವಾಂತರ ಹೇಳತೀರದು. ಮೊನ್ನೆ ರಸ್ತೆಯಲ್ಲಿಯೇ ಪಾರ್ಟಿ ಮಾಡಿರುವ ವ್ಯಕ್ತಿಗಳು ರಾತ್ರಿ ಇಡೀ ಅಲ್ಲಿದ್ದವರಿಗೆ ಹಾವಳಿ ಇಟ್ಟಿದ್ದಾರೆ.

ಇನ್ನೂ ಇದಲ್ಲದೆ ಅನೈತಿಕ ಚಟುವಟಿಕೆಗಳು ಮತ್ತು ಗಾಂಜಾ ಸೇವಿಸೋ ಕೃತ್ಯಗಳನ್ನೂ ಎಸಗುತ್ತಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.  ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಲ್ಲದೇ ವಾಗ್ವಾದ ನಡೆಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ