Breaking News

ಸಿಇಟಿ: 1,998 ವಿದ್ಯಾರ್ಥಿಗಳು ಗೈರು

Spread the love

ಬೆಳಗಾವಿ: ಜಿಲ್ಲೆಯ ವಿವಿಧ 29 ಕೇಂದ್ರಗಳಲ್ಲಿ ಶುಕ್ರವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ 1,998 ವಿದ್ಯಾರ್ಥಿಗಳು ಗೈರು ಹಾಜರಾದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಒಳಪಡುವ ನಗರದ 11, ರಾಮದುರ್ಗದ ಸ್ಟೇಟ್ ಪಿಯು ಕಾಲೇಜು, ಸವದತ್ತಿಯ ಎಸ್‌.ಕೆ. ಪಿಯು ಕಾಲೇಜು ಹಾಗೂ ಬೈಲಹೊಂಗಲದ ಜಿಜಿಡಿ ಪಿಯು ಕಾಲೇಜಿನ ಕೇಂದ್ರಗಳಲ್ಲಿ ಬೆಳಿಗ್ಗೆ ಭೌತವಿಜ್ಞಾನ ಮತ್ತು ಮಧ್ಯಾಹ್ನ ರಸಾಯನವಿಜ್ಞಾನ ವಿಷಯದ ಪರೀಕ್ಷೆಗಳು ನಡೆದವು.

ಭೌತವಿಜ್ಞಾನಕ್ಕೆ 5,316 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 4,746 ಮಂದಿ ಹಾಜರಾದರು. 570 ವಿದ್ಯಾರ್ಥಿಗಳು ಗೈರು ಹಾಜರಾದರು. ರಸಾಯನವಿಜ್ಞಾನ ವಿಷಯಕ್ಕೆ ನೋಂದಾಯಿಸಿದ್ದ 5,316 ಮಂದಿಯಲ್ಲಿ 4,741 ವಿದ್ಯಾರ್ಥಿಗಳು ಹಾಜರಾದರೆ, 575 ಮಂದಿ ಗೈರು ಹಾಜರಾದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 15 ಕೇಂದ್ರಗಳಲ್ಲಿ ಭೌತವಿಜ್ಞಾನಕ್ಕೆ 6,247 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 5,823 ಮಂದಿ ಹಾಜರಾದರು. 424 ವಿದ್ಯಾರ್ಥಿಗಳು ಗೈರು ಹಾಜರಾದರು. ಅಂತೆಯೇ ರಸಾಯನವಿಜ್ಞಾನ ವಿಷಯಕ್ಕೆ 6,247 ಮಂದಿ ಪೈಕಿ 5,818 ವಿದ್ಯಾರ್ಥಿಗಳು ಹಾಜರಾದರೆ 429 ಮಂದಿ ಗೈರು ಹಾಜರಾದರು.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ 2ನೇ ದಿನವೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.


Spread the love

About Laxminews 24x7

Check Also

ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ…

Spread the love ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ… ಖರೀದಿಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು!!! ಮಾನ್ಸೂನ್ ಆರಂಭಗೊಂಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ