Breaking News

ಬೆಳಗಾವಿ| ಬ್ರಾಹ್ಮಣರಿಗೆ ಮೀಸಲಾತಿ: ವೆಬಿನಾರ್‌ ನಾಳೆ.

Spread the love

ಬೆಳಗಾವಿ: ‘ರಾಜ್ಯ ಸರ್ಕಾರ ಇತ್ತೀಚೆಗೆ ಬ್ರಾಹ್ಮಣರಿಗೆ ಶೇ 10ರಷ್ಟು ಮೀಸಲಾತಿ ಜಾರಿ ಮಾಡಿ ಆದೇಶಿಸಿದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಆಗುವ ಪರಿಣಾಮಗಳ ಕುರಿತು ಜುಲೈ 26ರಂದು ಸಂಜೆ 4ಕ್ಕೆ ವೆಬಿನಾರ್‌ ಮೂಲಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಮತ್ತು ಮಾನವ ಬಂಧುತ್ವ ವೇದಿಕೆ ತಿಳಿಸಿವೆ.

‘ಕಲಬುರ್ಗಿಯ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಚಾಲನೆ ನೀಡುವರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಉಸ್ತೂರಿ ಮತ್ತು ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರದೀಪ ರಾಮಾವತ್ ವಿಷಯ ಮಂಡಿಸುವರು.

ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ವಕೀಲ ಎನ್. ಅನಂತ ನಾಯ್ಕ, ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಭಾಗವಹಿಸಲಿದ್ದಾರೆ.

ಆಸಕ್ತರು ವೆಬಿನಾರ್ ಝೂಮ್ ಆಯಪ್‌ ಮೂಲಕ ಮೀಟಿಂಗ್ ಐಡಿ:5992672811 ಪಾಸ್‌ವರ್ಡ್‌: AILUKARNA3 ನೆರವಿನಿಂದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸುವಂತೆ ಸಂಘಟನೆ ಕೋರಿದೆ.


Spread the love

About Laxminews 24x7

Check Also

ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ…

Spread the love ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ… ಖರೀದಿಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು!!! ಮಾನ್ಸೂನ್ ಆರಂಭಗೊಂಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ