ಹಾಸನ: ಕಾಫಿ ಎಸ್ಟೇಟ್ನಲ್ಲಿ ಗುಂಡೇಟಿನಿಂದ ರೈತ ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೇಶವಶೆಟ್ಟಿ (61) ಗುಂಡೇಟಿನಿಂದ ಸಾವನ್ನಪ್ಪಿದ ಕಾಫಿ ಬೆಳೆಗಾರ. ಭಾನುವಾರ (ಆ.30) ಸಂಜೆ ಬಂದೂಕು ಹಿಡಿದು ಅವರು ಕಾಫಿ ತೋಟಕ್ಕೆ ತೆರಳಿದ್ದರು. ಈ ವೇಳೆ ಕೈಯಲ್ಲಿದ್ದ ಬಂದೂಕಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಿಂದ 300 ಮೀಟರ್ ದೂರದಲ್ಲಿ ಅವರ ಶವ ಪತ್ತೆಯಾಗಿದ್ದು, ಗುಂಡು ಹಾರಿದ ನಂತರ ಸ್ವಲ್ಪ ದೂರು ನಡೆದುಕೊಂಡು ಬಂದು ನಂತರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುಂಡು ಹಾರಿದ ಸ್ಥಳದಲ್ಲಿ ಅವರ ಮೊಬೈಲ್ ಬಿದ್ದಿದೆ. ಹಾಗೂ ಮೃತದೇಹ ಬಿದ್ದಿರುವ ಕೆಲ ಮೀಟರ್ ಹಿಂದೆ ಬಂದೂಕು ಬಿದ್ದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸೋಕೋ ತಂಡ ಹಾಗೂ ಎಸ್ಪಿ ಶುಭಾನ್ವಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7