Breaking News

ಕಲಾವಿದನೂ ಎಲ್ಲರಂತೆ ಸಾಮಾನ್ಯ ಮನುಷ್ಯ

Spread the love

ತಮಗೆ ಕರಗತವಾಗಿರುವ ಕಲೆ ಪ್ರದರ್ಶಿಸುವಾಗ ಮಾತ್ರ ಕಲಾವಿದರು ಇತರರಿಗಿಂತ ವಿಶೇಷರಾಗುತ್ತಾರೆ. ಅದರ ಹೊರತಾಗಿ ವೇದಿಕೆಯಿಂದ ಕೆಳಗಿಳಿದ ತಕ್ಷಣ ಅವರೂ ಎಲ್ಲರಂತೆ ಓರ್ವ ಸಾಮಾನ್ಯ ಮನುಷ್ಯ. ಇದನ್ನು ಅರಿತು ಮುನ್ನಡೆದಾಗ ಮಾತ್ರ ಜೀವನಕ್ಕೊಂದು ಪರಿಪೂರ್ಣತೆ ಬರುತ್ತದೆ ಎಂದು ಹಿರಿಯ ರಂಗಕರ್ಮಿ ಬಿ.ಜಯಶ್ರೀ ಹೇಳಿದರು.
ನಾನು ನಮ್ಮವರೊಂದಿಗೆ ಹಾಗೂ ಓದಿ ಫೌಂಡೇಶನ್‌ಗಳ ಆಶ್ರಯದಲ್ಲಿ ಭರತೇಶ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ರಂಗಗೀತೆಗಳ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇತರ ಹಾಡುಗಾರಿಕೆಯಂತೆ ರಂಗಗೀತೆಗಳಿಗೆ ಆಲಾಪ, ಸ್ವರ, ಲಯಗಳ ಕಟ್ಟುಪಾಡಿಗಳಿಲ್ಲ ಎಂಬ ಮಾತಿದೆ. ಆದರೆ, ರಂಗಗೀತೆಗಳಿಗೂ ಕಟ್ಟುಪಾಡಿಗಳಿವೆ. ಅದನ್ನು ಪಾಲಿಸಿದಾಗ ಮಾತ್ರ ರಂಗಗೀತೆಗಳು ಒಲಿಯುತ್ತವೆ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಜೀವನದಲ್ಲಿ ಕಲಿಕೆಗೆ ವಯಸ್ಸಿನ ಗಡಿ ಇಲ್ಲ. ಆದರೆ, ಕೆಲವರು ಸಮಯವಿಲ್ಲ ಎಂದು ಸಬೂಬು ಹೇಳುತ್ತಿರುತ್ತಾರೆ. ಹೀಗೆ ಹೇಳುವವರು ತಮಗೆ ತಾವೇ ಮೋಸ ಮಾಡಿಕೊಂಡಂತೆ. ಎಲ್ಲರಿಗೂ ಒಂದು ದಿನದಲ್ಲಿ 24 ಗಂಟೆಗಳೇ ಇರುವುದು. ಅದನ್ನು  ಸರಿಯಾಗಿ ನಿರ್ವಹಣೆ ಮಾಡಿಕೊಂಡು ಮುನ್ನಡೆದವರು ಮಾತ್ರ ಸಾಧಕರಾಗುತ್ತಾರೆ ಎಂದು ಹೇಳಿದರು.
ಭರತೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಸಾವಿತ್ರಿ ದೊಡ್ಡಣ್ಣವರ, ಉಪೇಂದ್ರ ಕುಮಾರ, ಸರ್ವಮಂಗಳಾ ಅರಳಿಮಟ್ಟಿ, ವಿಜಯಲಕ್ಷ್ಮಿ ಪಾಟೀಲ, ಲಲಿತಾ ಹೂಗಾರ, ಮಾಧುರಿ ಹಿರೇಮಠ ಇತರರಿದ್ದರು. ಎರಡು ದಿನದ ಶಿಬಿರದಲ್ಲಿ ಬಿ.ಜಯಶ್ರೀ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ರಂಗಗೀತೆಗಳ ಹಾಡುಗಾರಿಕೆ ಕಲಿಸಿಕೊಟ್ಟರು.

Spread the love

About Laxminews 24x7

Check Also

ಬೆಂಗ್ಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಸರಣಿ ಅಪಘಾತ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ನಗರದ ಏರ್‌ಪೋರ್ಟ್‌ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರೀ ಅನಾಹುತವೊಂದು ತಪ್ಪಿದೆ. ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ