Breaking News

ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದ?: ಪ್ರಿಯಾಂಕ್‌ ಖರ್ಗೆ

Spread the love

ನವದೆಹಲಿ: ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದಾ ಅಂತ ಸಚಿವ ಪ್ರಿಯಾಂಕ್‌ ಖರ್ಗೆ  ಪ್ರಶ್ನೆ ಮಾಡಿದರು.

ಆರ್‌ಎಸ್‌ಎಸ್ ನೋಂದಣಿ ಮತ್ತು ಹಣಕಾಸು ವಹಿವಾಟುಗಳ ಮಾಹಿತಿ ಕೋರಿ ಸರ ಸಂಘ ಸಂಚಾಲಕ ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರ ರಾಜ್ಯದಲ್ಲಿ ಸಂಚಲನ ಸೃಷ್ಠಿಸಿದೆ. ಪತ್ರದ ಬೆನ್ನಲ್ಲೇ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ. ಬಿಜೆಪಿ ನಾಯಕರು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಲು ಇಂದು ದೆಹಲಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಅಯೋಧ್ಯೆಯಲ್ಲಿ ದೇಣಿಗೆ ವಿಚಾರದಲ್ಲಿ ಹಗರಣ ನಡೆದಿದೆ ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡುವ ಪರಿಸ್ಥಿತಿ ಬಂದಿದೆ. ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾಕೆ ಲೆಕ್ಕ ಕೊಡಬಾರದು? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಆರ್‌ಎಸ್‌ಎಸ್‌ನ ಆಳು ಮಕ್ಕಳು, ಅವರು ವಿರೋಧ ಮಾಡೇ ಮಾಡ್ತಾರೆ. ಪಾರದರ್ಶಕತೆ ಕೇಳುವುದು ತಪ್ಪಾ? ಪತ್ರದಲ್ಲಿ ತಪ್ಪೇನಿದೆ ಹೇಳಿ? ನಿತ್ಯ ಸಾವಿರಾರು ಶಾಖಾ ಸಭೆಗಳನ್ನ ನಡೆಸಲಾಗುತ್ತಿದೆ. ಆರ್‌ಎಸ್‌ಎಸ್‌ ಮಾಹಿತಿ ನೀಡದಂತೆ ಲಕ್ಷಾಂತರ ಜನರನ್ನ ಸೇರಿಸಿ ಪಂಥಸಂಚಲನ ಮಾಡುತ್ತಿದ್ದಾರೆ. ಅಖಿಲ ಭಾರತ ಪ್ರತಿನಿಧಿ ಸಭಾ ಈ ಮಾಹಿತಿ ನೀಡಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಪಥಸಂಚಲನ ಮಾಡಿದರೆ ಪ್ರಶ್ನೆ ಮಾಡಬಾರದಾ? ಎಂದು ಕೇಳಿದರು.

ಜವಬ್ದಾರಿ ಸ್ಥಾನದಲ್ಲಿ ಕುಳಿತು ನಾನು ಕೇಳುತ್ತಿದ್ದೇನೆ. ಯಾವುದೇ ಧರ್ಮದ ಸಂಘ ಸಂಸ್ಥೆಗಳಾದರೂ ಕಾನೂನು ಅಡಿಯಲ್ಲಿ ಬರಬೇಕು. ಯಾವುದೇ ಕಾರ್ಯಕ್ರಮ ಮಾಡಿದ್ರೂ ಪೊಲೀಸ್ ಅನುಮತಿ ಪಡೆಯಬೇಕು. ಆರ್‌ಎಸ್‌ಎಸ್ ಪಡೆಯುವುದು ತಪ್ಪಾ? ನಿಮ್ಮ ಆಡಳಿತ ಸಿಬ್ಬಂದಿ ಯಾರು ಎಂದು ತಿಳಿದುಕೊಳ್ಳಬಾರದಾ? ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ ಎಷ್ಟು ಬರ್ತಿದೆ? ಇದೆಲ್ಲಾ ಕೇಳಬಾರದಾ? ಆರ್‌ಎಸ್‌ಎಸ್‌ನವರು ಕಾನೂನು ಹೋರಾಟಕ್ಕೆ ಮೂರು ಕೋಟಿ ಖರ್ಚು ಮಾಡಿದ್ದಾರೆ. ಸಂಘದ ನಾಯಕರು ಅಮೆರಿಕ ಪ್ರವಾಸ ಮಾಡುತ್ತಾರೆ. ಅವರಿಗೆ ಹಣ ಎಲ್ಲಿಂದ ಬರ್ತಿದೆ? ಅವರ ಚಟುವಟಿಕೆಗಳು ಏನು? ಅಂತ ಪ್ರಶ್ನೆಗಳ ಮಳೆಸುರಿಸಿದರು.

ಸಫಾಯಿ ಕರ್ಮಚಾರಿಗೂ ನೊಂದಣಿ ಬೇಕು, ಇವರಿಗೆ ನೋಂದಣಿ ಯಾಕೆ ಇಲ್ಲ? ಎಲ್ಲದಕ್ಕೂ ಧರ್ಮ ಅಡ್ಡ ತರ್ತಾರೆ, ನಾನು ಎಲ್ಲಿ ಧರ್ಮ ಉಲ್ಲೇಖಿಸಿದ್ದೇನೆ? ನನ್ನ ಪತ್ರದಲ್ಲಿ ಹಿಂದೂ ಅನ್ನೊ ಪದ ಎಲ್ಲಿದೆ? ಕೆಲವು ಕಡೆ ನನ್ನ ಪತ್ರಕ್ಕೆ ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಅವರು ಇನ್ನು ಉತ್ತರ ನೀಡಿಲ್ಲ ಮೋಹನ್ ಬಾಗವತ್ ಅವರು ಜೂನ್ 13 ರಂದು ನೀಡಿದ ಹೇಳಿಕೆಯನ್ನು ತಿರುಚಲಾಗುತ್ತಿದೆ. ನಾನು ನಿನ್ನೆ ಪತ್ರ ಬಿಡುಗಡೆ ಮಾಡಿದ್ದೇನೆ. ಅದಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ, ಹಾಗಿದ್ದಾಗ ಅದು ಉತ್ತರ ಹೇಗೆ ಆಗಲು ಸಾಧ್ಯ? ನಾನು ಧರ್ಮಕ್ಕೆ ನೋಂದಣಿ ಕೇಳ್ತಿಲ್ಲ, ಸಂಘಕ್ಕೆ ಕೇಳ್ತಿದ್ದೇನೆ ಅವರು ಉತ್ತರಿಸಲಿ ಎಂದರು.


Spread the love

About Laxminews 24x7

Check Also

ಬಾಲಕಿ ವೆನ್ನಿಲಾ ಕೊಲೆ ಕೇಸ್‌ – ಪ್ರಿಯಾಂಕಾಳ ಸುಳ್ಳುಪತ್ತೆ ಪರೀಕ್ಷೆಗೆ ಸಿದ್ಧತೆ

Spread the loveಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣದಲ್ಲಿ ತಾಯಿ ಪ್ರಿಯಾಂಕಾ ವಿರುದ್ಧ ಅನುಮಾನಗಳು ಮುಂದುವರಿದಿವೆ. ಪ್ರಕರಣದ ಸತ್ಯ ಬಯಲಿಗೆಳೆಯಲು ಪಾಲಿಗ್ರಾಫ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ