Breaking News

ಜ್ಯೂಸಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಅತ್ಯಾಚಾರ – ಬೆತ್ತಲೆ ವಿಡಿಯೋ ಚಿತ್ರೀಕರಿಸಿ ವಿವಾಹಿತೆಗೆ ಬ್ಲ್ಯಾಕ್‌ಮೇಲ್‌

Spread the love

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಬರ್ತಿದ್ದ ಮಹಿಳೆಗೆ ಚಿಕ್ಕಮ್ಮನ ಮನೆಯಲ್ಲಿ ಪರಿಚಿತನಾದ ವ್ಯಕ್ತಿ ಮಸಲತ್ತು ಮಾಡಿ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ.

ಆಕೆಯನ್ನ ನಂಬಿಸಿ ತನ್ನ ಮನೆಗೆ ಕರೆದೊಯ್ದ ಕಾಮುಕ ಜ್ಯೂಸ್‌ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ, ಆಕೆಯ ಮೇಲೆ ಆತ್ಯಾಚಾರ ಎಸಗಿದ್ದಾನೆಂದು ವಿವಾಹಿತ ಮಹಿಳೆ ಆರೋಪಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕಾಮುಕ ಆಕೆಯ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ ಮೇಲ್‌ ಮಾಡೋಕೆ ಶುರು ಮಾಡಿದ್ದಾನೆ.

ಒಂದೂವರೆ ವರ್ಷದಿಂದ ಅದೇ ಬೆತ್ತಲೆ ವಿಡಿಯೋ ಇಟ್ಕೊಂಡು ಆಕೆಯನ್ನ ಮತ್ತಷ್ಟು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸುಮಾರು 400 ಗ್ರಾಂ ಚಿನ್ನಾಭರಣ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಸಹ ಮಾಡಿದ್ದಾನಂತೆ. ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾನ ಮರ‍್ಯಾದೆಗೆ ಅಂಜಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಅಂತನ ಪೊಲೀಸ್‌ ಠಾಣೆಗೆ ಕೇಸ್‌ ನೀಡಿ ತನಗಾದ ನೋವನ್ನ ತೋಡಿಕೊಳ್ತಿರೋ ಈಕೆಯ ಹೆಸರು ಮಾನಸ ಅಂತ (ಹೆಸರು ಬದಲಾಯಿಸಲಾಗಿದೆ) ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಿವಾಸಿ, ಗಂಡ ಮಗನೊಂದಿಗೆ ಸುಖಸಂಸಾರ ಮಾಡಿಕೊಂಡಿದ್ದ ಮಹಿಳೆಗೆ ಬೆಂಗಳೂರಿನಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಬರುವಾಗ ಚಿಕ್ಕಮ್ಮನ ಸ್ನೇಹಿತ ಮಂಡ್ಯ ಮೂಲದ ರಮೇಶ್‌ ಎಂಬವನ ಪರಿಚಯವಾಗಿದೆ.

ಆದೊಂದು ದಿನ ಚಿಕ್ಕಮ್ಮನ ಮನೆಗೆ ಅಂತ ಹೊರಟಿದ್ದ ಮಹಿಳೆಯನ್ನ ನಂಬಿಸಿ ತನ್ನ ಮನೆಗೆ ಕರೆದೊಯ್ದಿರೋ ಆರೋಪಿ ರಮೇಶ್‌, ಆಕೆಗೆ ಜ್ಯೂಸ್‌ ನಲ್ಲಿ ಮತ್ತು ಬರುವ ಔಷಧಿ ಬೆರಸಿಕೊಟ್ಟು ಆಕೆ ಮೇಲೆ ಬಲತ್ಕಾರ ನಡೆಸಿದ್ದಾನಂತೆ. ಇನ್ನೂ ಆಕೆಯ ಬೆತ್ತಲೆ ವಿಡಿಯೋ ಮಾಡಿಕೊಂಡು ಬೆಳಗಾದ ಕೂಡಲೇ ಇದನ್ನ ಯಾರ ಬಳಿಯಾದ್ರೂ ಹೇಳಿದ್ರೆ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ಮರ್ಯಾದೆ ಹರಾಜು ಹಾಕ್ತೀನಿ. ನಿನ್ನ ಗಂಡನಿಗೂ ಕಳಿಸಿ ಸಂಸಾರ ಬೀದಿ ಪಾಲು ಮಾಡ್ತೇನೆ ಅಂತ ಬ್ಲಾಕ್‌ ಮೇಲ್‌ ಮಾಡಿದ್ದಾನಂತೆ.

ಮರ‍್ಯಾದೆಗೆ ಅಂಜಿದ ಮಾನಸ ಯಾರ ಬಳಿಯೂ ನಡೆದ ಘಟನೆಯನ್ನ ಹೇಳಿಕೊಂಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರೊ ರಮೇಶ್‌, ಒಂದೂವರೆ ವರ್ಷದಿಂದ ವಿಡಿಯೋ ಇಟ್ಕೊಂಡು ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನಂತೆ, ಜೊತೆಗೆ ಆಕೆ ಬಳಿ ಇದ್ದ 100 ಗ್ರಾಂ ಚಿನ್ನಾಭರಣ, 4-5 ಲಕ್ಷ ಹಣ ಸಹ ಪಡೆದಕೊಂಡು ವಂಚನೆ ಮಾಡಿದ್ದಾನಂತೆ, ಇದೆಲ್ಲವೂ ಗಂಡನಿಗೂ ತಿಳಿದು ಕೊನೆಗೆ ಈಗ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಾಮುಕ ರಮೇಶ್‌ ವಿರುದ್ದ ದೂರು ಸಹ ದಾಖಲಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದಲೂ ರಮೇಶ್‌ನ ಬಲೆಗೆ ಬಿದ್ದಿದ್ದ ಸಂತ್ರಸ್ಥ ಮಹಿಳೆ ಆತ್ಮಹತ್ಯೆ ಯತ್ನವೂ ನಡೆಸಿದ್ದಳಂತೆ. ಆದರೆ ಕೊನೆಗೆ ಈಗ ಆಕೆಗೆ ಗಂಡನೇ ಧೈರ್ಯ ಹೇಳಿ ಪೊಲೀಸ್‌ ಠಾಣೆಗೆ ದೂರು ಕೊಡಿಸಿದ್ದಾನೆ. ತನಗಾದ ಅನ್ಯಾಯ ಇನ್ಯಾವ ಮಹಿಳೆಗೆ ಆಗಬಾರದು ಅಂತ ಸಂತ್ರಸ್ಥ ಮಹಿಳೆ ದಿಟ್ಟ ಹೆಜ್ಜೆ ಇಟ್ಟು ಪೊಲೀಸರ ಮೊರೆ ಹೋಗಿದ್ದಾಳೆ. ಹೀಗಾಗಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಆರೋಪಿಯನ್ನ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.


Spread the love

About Laxminews 24x7

Check Also

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

Spread the loveನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್  ಅವರನ್ನ ಕೇಂದ್ರ ಸರ್ಕಾರ ನೇಮಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ