Breaking News

ಪಾಲಿಕೆ ಆಯುಕ್ತರಿಂದ ಪುಟ್‌ಪಾತ್ ತೆರವು ಕಾರ್ಯಾಚರಣೆ

Spread the love

ಬೆಳಗಾವಿ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರ್‌ಪಿಡಿ ವೃತ್ತದಿಂದ ಗೋಮಟೇಶ ವಿದ್ಯಾಪೀಠದ ವರಗಿನ ರಸ್ತೆಯ ಎರಡು ಬದಿಗಳಲ್ಲಿ ಪುಟ್‌ಪಾತ್ ತೆರವು ಕಾರ್ಯಾಚರಣೆ ಮಂಗಳವಾರ ಪಾಲಿಕೆ ಅಧಿಕಾರಿಗಳು ನಡೆಸಿದರು.
 ರಸ್ತೆಯ ಎರಡು ಕಡೆಯಲ್ಲಿ ಅಂಗಡಿಕಾರರು ಪುಟ್‌ಪಾತ್  ಒತ್ತುವರಿ ಮಾಡಿಕೊಂಡಿದ್ದರು. ತಳ್ಳುವ ಗಾಡಿಯವರು ಪುಟ್‌ಪಾತ್ ಮೇಲೆ ಹಣ್ಣು ಹೂವು, ತರಕಾರಿ, ಎಗ್ಗರೈಸ್ ಹೀಗೆ ವಿವಿಧ ಅಂಗಡಿಕಾರರ ವ್ಯಾಪಾರು ವಹಿವಾಟು ನಡೆಸುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಯಂತ್ರಗಳ ಮೂಲಕ 40ಕ್ಕೂ ಅಧಿಕ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದರು.
ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆ, ರಸ್ತೆ ಬದಿಗಳಲ್ಲಿ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಗಣಪತಿ ಗಲ್ಲಿ, ಶನಿವಾರ ಕೂಟ, ಮಾರುತಿ ಗಲ್ಲಿ, ಖಡೇಬಜಾರ, ಎಪಿಎಂಸಿ ರಸ್ತೆ, ಕಾಲೇಜು ರಸ್ತೆ, ಕೃಷ್ಣದೇವರಾಯ ವೃತ್ತ ಸೇರಿ ವಿವಿಧ ಭಾಗಗಳಲ್ಲಿ ಪುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.  ಅಂಗಡಿಕಾರರ ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪಾಲಿಕೆ ವತಿಯಿದ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಂಗಡಿಕಾರರು ಆಕ್ರೋಶ; ಮಹಾನಗರ ಪಾಲಿಕೆ ತೆರಿಗೆ ವಸೂಲಿ ಸಿಬ್ಬಂದಿ, ಕೆಲ ಅಧಿಕಾರಿ ಪುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಇದೀಗ ಆಯುಕ್ತರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ. ನಮ್ಮ ನಷ್ಟಕ್ಕೆ ಯಾರನ್ನು ದೋಷಿಸಬೇಕು. ವರ್ಷಗಳಿಂದ ತೆರಿಗೆ ಕಟ್ಟಿಕೊಂಡು ಬಂದರೂ ಅಂಗಡಿಕಾರರಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ