Breaking News

ಶ್ರೀಗಳನ್ನು ಎಳೆದು ಹೊರಗೆ ಹಾಕ್ತಾರಂತೆ, ತಾಕತ್‌ ಇದ್ರೆ ಮುಟ್ಟಿ – ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಎಚ್ಚರಿಕೆ

Spread the love

ದಾವಣಗೆರೆ: ಪಂಚಮಸಾಲಿ ಪೀಠದ  ಟ್ರಸ್ಟಿಗಳು ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳನ್ನು ಏಳೆದು ಹೊರ ಹಾಕುತ್ತೇವೆ ಎಂದು ಹೇಳಿದ್ದಾರೆ. ತಾಕತ್ ಇದ್ದರೆ ಬಂದು ಸ್ವಾಮೀಜಿಗಳನ್ನು  ಮುಟ್ಟಿ ನೋಡೋಣಾ‌ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಟ್ರಸ್ಟಿಗಳಿಗೆ ಎಚ್ಚರಿಕೆ ನೀಡಿದರು.

ಟ್ರಸ್ಟಿಗಳಿಂದ ಲೆಕ್ಕ ಕೊಡುವ ಕಾರ್ಯಕ್ರಮದ ಹಿನ್ನೆಲೆ, ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಬೆಂಬಲಿಗರಿಂದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ಮಾತನಾಡಿ, ಟ್ರಸ್ಟ್‌ನವರು ಪೊಲೀಸರ ರಕ್ಷಣೆಯಲ್ಲಿ ಬಂದು ಸ್ವಾಮೀಜಿಗಳನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಟ್ರಸ್ಟಿಗಳ ವಿರುದ್ದ ಸಮಾಜ ಒಂದು ತೀರ್ಮಾನ ತೆಗೆದುಕೊಂಡಿದೆ. ಪಂಚಮಸಾಲಿ ಸಂಘ ಈಗಾಗಲೇ ಟ್ರಸ್ಟಿಗಳನ್ನು ಹೊರ ಹಾಕಿದೆ. ಪೊಲೀಸರ ಭದ್ರತೆಯಲ್ಲಿ ಬಂದು ಲೆಕ್ಕ ಕೊಟ್ಟು ಹೋಗಿದ್ದಾರೆ. ಪ್ರಾಮಾಣಿಕವಾಗಿ ಇದ್ದಿದ್ದರೆ ಪೊಲೀಸರ ಭದ್ರತೆ ಏಕೆ ಬೇಕಿತ್ತು? ಪ್ರಧಾನ ಧರ್ಮಧರ್ಶಿ ಬಿ.ಸಿ ಉಮಾಪತಿ ಸೇರಿದಂತೆ ಟ್ರಸ್ಟಿಗಳು ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ದಾಸೋಹದ ಹಣ ತಿಂದ ಚಂದ್ರಶೇಖರ್ ಪೂಜಾರ್ ಇದುವರೆಗೂ ಬಂದು ಪ್ರಮಾಣ ಮಾಡಿಲ್ಲ. ತಾಲೂಕಿನಲ್ಲಿರುವ ಎಲ್ಲಾ ಮಠಗಳು ಶೈಕ್ಷಣಿಕವಾಗಿ ಎಷ್ಟು ಸೌಲಭ್ಯ ಮಾಡಿದ್ದಾರೆ. ಇದೇ ಮಠದ ಪಕ್ಕದಲ್ಲಿರುವ ಕನಕ ಪೀಠ, ವೇಮನ ಪೀಠವನ್ನು ನೋಡಿ ಮೊದಲು. ಅಲ್ಲಿ ಶೈಕ್ಷಣಿಕವಾಗಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಇಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ