Breaking News

ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ

Spread the love

ಚಿಕ್ಕಮಗಳೂರು: ಸಾಂಬಾರ್ ಮಾಡಿಲ್ಲ ಅಂತ ಅಪ್ಪ  ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು  ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.

ಸೌಜನ್ಯ ಪೂಜಾರಿ (22) ಮೃತ ದುರ್ದೈವಿ. ಶನಿವಾರ ಬೆಳಗ್ಗೆ ತರಕಾರಿ ತಂದುಕೊಟ್ಟು ಸಾಂಬಾರ್ ಮಾಡುವಂತೆ ಯುವತಿಗೆ ಅಪ್ಪ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಮಗಳು ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಸಾಂಬಾರ್ ಏಕೆ ಮಾಡಿಲ್ಲ ಎಂದು ಅಪ್ಪ ಬೈದಿದ್ದಾರೆ. ಮಗಳಿಗೆ ಬೈದ ಅಪ್ಪ ಸಾಂಬಾರ್ ತರಲು ಪಕ್ಕದ ಮನೆಗೆ ಹೋಗಿದ್ದರು. ಅಪ್ಪ ಬರುವಷ್ಟರಲ್ಲಿ ಸೌಜನ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನಾ ಸ್ಥಳಕ್ಕೆ ಗೋಣಿಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ