ಗ್ರಾಮದ ದೈವಗಳ ಆಶೀರ್ವಾದದೊಂದಿಗೆ ಸಾಂಸ್ಕೃತಿಕ ಕಲೆಗಳ ಸಂಭ್ರಮ.
ದಿನಾಂಕ:20-04-2026ರಂದು #ಕುರಬಗಟ್ಟಿ ಗ್ರಾಮದ ಶ್ರೀ ಮಾರುತೇಶ್ವರ, ಶ್ರೀ ಬಸವೇಶ್ವರ ಹಾಗೂ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ “ಸಂಗೀತ ಹಾಸ್ಯ ರಸಮಂಜರಿ” ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಲಾಯಿತು.
ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ಬಾಂಧವ್ಯವನ್ನು ಬೆಸೆಯುವ ಕೊಂಡಿಗಳು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಭೆಗಳಿಗೆ ವೇದಿಕೆ ನೀಡುವುದರ ಜೊತೆಗೆ ಜನರಲ್ಲಿ ಸಂತೋಷ ಮತ್ತು ಐಕ್ಯತೆಯನ್ನು ಮೂಡಿಸುತ್ತವೆ. ಗ್ರಾಮಸ್ಥರ ಈ ಸಂಭ್ರಮದಲ್ಲಿ ಭಾಗಿಯಾದದ್ದು ನನ್ನ ಮನಸ್ಸಿಗೆ ಅತ್ಯಂತ ಸಂತಸ ತಂದಿದೆ.
ಈ ಸುಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಹಾಗೂ ಕಲಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
Laxmi News 24×7