Breaking News

ಏನೇ ಪರಿಹಾರ ಕೊಟ್ರೂ ಮಗ ಮರಳಿ ಬರೋದಿಲ್ಲ – ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕುದುರೆ ರೈಡರ್‌ ತಂದೆ ಕಣ್ಣೀರು

Spread the love

2025ರ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಸುಂದರ ತಾಣದಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ನೆತ್ತರು ಹರಿಸಿದ್ದರು ಪಾಕ್‌ ಉಗ್ರರು . ಇದಕ್ಕೆ ಹೆಜ್ಜೆ-ಹೆಜ್ಜೆಗೂ ದಿಟ್ಟ ಉತ್ತರ ನೀಡುತ್ತಲೇ ಬಂದಿದ್ದ ಭಾರತೀಯ ಸೇನೆ, ಪ್ರತೀಕಾರಕ್ಕಾಗಿ ಕಾಯುತ್ತಲೇ ಇತ್ತು. ಕೊನೆಗೂ ಸಿಕ್ಕ ಸಮಯ ಬಳಸಿಕೊಂಡ ಭಾರತೀಯ ಸೇನೆ  ನರಮೇಧ ನಡೆಸಿದ್ದ ಪಾತಕಿಗಳನ್ನು ಹತ್ಯೆಗೈದಿತು. ಶ್ರೀನಗರದ ದಚಿಗಮ್‌ ಅರಣ್ಯ ಪ್ರದೇಶದಲ್ಲಿ ʻಆಪರೇಷನ್‌ ಮಹಾದೇವ್‌ʼ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನ ಭಾರತೀಯ ಸೇನೆಯ ಚಿನಾರ್‌ ಕಾರ್ಪ್ಸ್‌ ಹತ್ಯೆಗೈದಿತು.

ಇದೀಗ ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ ಸಮೀಪಿಸುತ್ತಿದ್ದು, ಹಳೆಯ ನೆನೆಪುಗಳು ಮತ್ತೆ ಮರುಕಳಿಸುತ್ತಿವೆ. ಆ ದಿನ ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದ ಕುದುರೆ ರೈಡರ್‌ ಸೈಯದ್ ಆದಿಲ್ ಹುಸೇನ್ ಶಾ (Syed Adil Hussain Shah) ಧೈರ್ಯ ಮಾಡಿ ಓರ್ವನ ಉಗ್ರನಿಂದ ರೈಫಲ್‌ ಕಸಿದುಕೊಳ್ಳಲು ಯತ್ನಿಸಿ ಸಾವನ್ನಪ್ಪಿದ್ದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ಪರಿಹಾರ ನೀಡಲಾಗಿದ್ದರೂ, ಮನೆ ಮಗ ಜೀವ ಕಳೆದುಕೊಂಡಿದ್ದನ್ನ ನೆನೆದು ಪೋಷಕರು ಕಣ್ಣೀರಿಟ್ಟಿದ್ದಾರೆ.

ಉಗ್ರರ ಗುಂಡಿಗೆ ಬಲಿಯಾದ ಮಗನ ತಂದೆ ಸೈಯದ್ ಹೈದರ್ ಶಾ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ, ಇದ್ದ ಒಬ್ಬ ಮಗನನ್ನ ಕಳೆದುಕೊಂದು ದಿಕ್ಕಿಲ್ಲದಂತಾಗಿದ್ದ ನಮಗೆ ಸರ್ಕಾರ ಎಲ್ಲಾ ಪರಿಹಾರ ಕಲ್ಪಿಸಿದೆ. ಆರ್ಥಿಕ ಪರಿಹಾರ, ಶಾಶ್ವತ ಸರ್ಕಾರಿ ಉದ್ಯೋಗ, ಮನೆ ಮತ್ತು ಪುನರ್ವಸತಿಗಾಗಿ ಎಲ್ಲಾ ರೀತಿಯ ಸಹಕಾರಗಳನ್ನ ನೀಡಿದೆ. ಇಂದು ಏನೇ ಪರಿಹಾರ ಸಿಕ್ಕಿದ್ದರು, ನಮ್ಮ ಮಗ ಮರಳಿ ಬರೋದಿಲ್ಲ ಅನ್ನೋದಂತೂ ಸತ್ಯ. ಇದು ನೆನೆಸಿಕೊಂಡಾಗ ನಮ್ಮ ಮನಸ್ಸಿಗೂ ಶಾಂತಿ ಸಿಗಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಆ ದಿನ ಆದಿಲ್‌ ಪ್ರವಾಸಿಗರ ಜೀವ ಉಳಿಸಲು ಪಣ ತೊಟ್ಟಿದ್ದ, ಯಾವುದೇ ಧರ್ಮ ಅಥವಾ ಜಾತಿಯ ಜನ ಎಂಬುದನ್ನ ಅವನು ನೋಡಲಿಲ್ಲ. ಯಾವತ್ತೂ ಹಿಂದೂ, ಮುಸ್ಲಿಂ ಅಥವಾ ಸಿಖ್ ಅನ್ನೋ ಭೇದ ಭಾವ ಮಾಡಲಿಲ್ಲ. ಮಾನವೀಯತೆಗೆ ಬೆಲೆ ನೀಡಿದ್ದವನು ನನ್ನ ಮಗ. ಪರರ ಜೀವ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ. ಮನುಷ್ಯರನ್ನ ಮನುಷ್ಯರಾಗಿಯೇ ನೋಡುತ್ತಿದ್ದ ಎಂದು ಭಾವುಕರಾಗಿದ್ದಾರೆ.

ಮನೆಯ ಹಿರಿಯ ಮಗನಾಗಿದ್ದ ಆದಿಲ್‌, ಇಡೀ ಮನೆ ಜವಾಗದಾರಿ ಹೊತ್ತಿದ್ದ. ಏನೇ ಕೆಲಸ ಇದ್ದರೂ ತಾನೇ ನಿಂತು ನಿಭಾಯಿಸುತ್ತಿದ್ದ. ಆದ್ರೆ ಇಂದು ಮನೆಯ ಗೋಡೆಗಳ ಮೇಲಷ್ಟೇ ಅವನ ಫೋಟೋಗಳನ್ನ ನೋಡುವಂತಾಗಿದೆ ಎಂದು ಕಣ್ಣೀರಿಟ್ದಿದ್ದಾರೆ.

ಕುಟುಂಬಕ್ಕೆ ಸಕಲ ಪರಿಹಾರ
ಮಗನನ್ನು ಕಳೆದುಕೊಂಡು ಕಂಗೆಟ್ಟಿದ್ದ ಕುರುರೆ ರೈಡರ್‌ ಆದಿಲ್ ಹುಸೇನ್ ಶಾ ಕುಟುಂಬಕ್ಕೆ ಮಹಾರಾಷ್ಟ್ರ ಡಿಸಿಎಂ ಏಕನಾಥ್‌ ಶಿಂಧೆ, ಮನೆ ಹಸ್ತಾಂತರಿಸಿದ್ರು. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆದಿಲ್‌ ಪತ್ನಿಗೆ 5 ಲಕ್ಷ ರೂಪ ಆರ್ಥಿಕ ಪರಿಹಾರ ಮತ್ತು ಶಾಶ್ವತ ಸರ್ಕಾರಿ ಉದ್ಯೋಗವನ್ನು ಕಲ್ಪಿಸಿತು. ಆದಿಲ್ ಅವರ ಕಿರಿಯ ಸಹೋದರನಿಗೆ ವಕ್ಫ್ ಮಂಡಳಿಯಲ್ಲಿ ಕೆಲಸ ನೀಡಲಾಗಿದೆ.

Pahalgam Terrorists 1

ರೈಫಲ್‌ ಕಸಿದುಕೊಳ್ಳಲು ಹೋಗಿ ಉಗ್ರರ ಗುಂಡೇಟಿಗೆ ಬಲಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸೈಯದ್ ಆದಿಲ್ ಹುಸೇನ್ ಶಾ (Syed Adil Hussain Shah) ಪ್ರಾಣ ಕಳೆದುಕೊಂಡರು. ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದಾಗ, ಸೈಯದ್‌ ಧೈರ್ಯ ಮಾಡಿ ಓರ್ವನ ಉಗ್ರನಿಂದ ರೈಫಲ್‌ ಕಸಿದುಕೊಳ್ಳಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸೈಯದ್‌ ಮೇಲೆ ಗುಂಡು ಹಾರಿಸಿದ್ದರು.

ಸೈಯದ್‌ ಆದಿಲ್‌ ಪಹಲ್ಗಾಮ್‌ ಕಾರು ಪಾರ್ಕಿಂಗ್ ಸ್ಥಳದಿಂದ ಕುದುರೆಯ ಮೇಲೆ ಪ್ರವಾಸಿಗರನ್ನು ಬೈಸರನ್‌ಗೆ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. ನರಮೇಧದಲ್ಲಿ ಸೈಯದ್‌ ಜೊತೆ 25 ಪುರುಷ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದರು. ಕುಟುಂಬದ ಏಕೈಕ ಜೀವನಾಧಾರ ಸೈಯದ್‌ ಆಗಿದ್ದರು.


Spread the love

About Laxminews 24x7

Check Also

ದೆಹಲಿ-NCR ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಪಾಕ್‌ ಮೂಲದ ಇಬ್ಬರು ಶಂಕಿತ ಉಗ್ರರ ಬಂಧನ

Spread the loveನವದೆಹಲಿ: ದೆಹಲಿ-ಎನ್‌ಸಿಆರ್  ಪ್ರದೇಶದಲ್ಲಿ ಗುಂಡು ಹಾರಿಸುವುದು, ಗ್ರೆನೇಡ್ ದಾಳಿ ನಡೆಸುವುದು ಮತ್ತು ನಿರ್ದಿಷ್ಟ ವ್ಯಕ್ತಿಗಳ ಹತ್ಯೆಗೆ ಪಿತೂರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ