Breaking News

ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ

Spread the love

ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿದೆ. ಮಹಿಳಾ ಮೀಸಲಾತಿ ಕಾಯ್ದೆಗೆ 131ನೇ ತಿದ್ದುಪಡಿ ತರುವ ಮೂಲಕ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಮತದಾನದ ಮೂಲಕ ಮಸೂದೆ ಅಂಗೀಕರಿಸಲು ನಿರ್ಧರಿಸಲಾಗಿತ್ತು. ಆದ್ರೆ 3ನೇ ಎರಡರಷ್ಟು ಬಹುಮತ ಸಿಗದ ಹಿನ್ನೆಲೆ ಮಸೂದೆಗೆ ಸೋಲಾಗಿದೆ.

ವಿಪಕ್ಷಗಳ ಹಠದಿಂದಾಗಿ ಮೊದಲು ಮಂಡಿಸಿದ ಮಹಿಳಾ ಮೀಸಲಾತಿ ಬಿಲ್ ಸೋಲು ಕಂಡಿದೆ. ಆದ್ದರಿಂದ ಉಳಿದ 2 ಬಿಲ್‌ಗಳನ್ನೂ ಸರ್ಕಾರ ಹಿಂಪಡೆದಿದೆ.

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ 326 ಮತಗಳ ಅಗತ್ಯವಿತ್ತು (ಬಿಲ್‌ಗೆ 3ನೇ 2ರಷ್ಟು ಬಹುಮತ ಬೇಕಿತ್ತು. ಹಾಗಾಗಿ, ಹಾಜರಿದ್ದ 489 ಸದಸ್ಯರ ಪೈಕಿ 326 ಮತ ಬೇಕಿತ್ತು). ಆದ್ರೆ ಲೋಕಸಭೆಯ 543 ಸದಸ್ಯರ ಪೈಕಿ 489 ಸದಸ್ಯರು (54 ಸದಸ್ಯರು ಅನುಪಸ್ಥಿತಿ) ಮತದಾನದಲ್ಲಿ ಪಾಲ್ಗೊಂಡಿದ್ದರು. ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದ್ರೆ, ವಿರುದ್ಧವಾಗಿ 230 ಸದಸ್ಯರು ಚಲಾಯಿಸಿದ್ರು. ಕೊನೆಗೆ 54 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು.

ವಿಪಕ್ಷಗಳ ಹಠ, ಅಸಹಕಾರದಿಂದಲೇ ಬಿಲ್‌ಗಳಿಗೆ ಸೋಲಾಗಿದೆ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಿಡಿಕಾರಿದರು. ಮಸೂದೆ ಸೋಲುತ್ತಿದ್ದಂತೆಯೇ ಸಂಸತ್‌ನ ಹೊರಭಾಗದಲ್ಲಿ ಎನ್‌ಡಿಎ ಸಂಸದರು ಪ್ರತಿಭಟನೆ ನಡೆಸಿದರು. ವಿಪಕ್ಷಗಳ ವಿರುದ್ಧ ಧಿಕ್ಕಾರ ಕೂಗಿದರು. ವಿಪಕ್ಷಗಳು ಮಹಿಳಾ ವಿರೋಧಿಗಳು ಅಂತ ಆಕ್ರೋಶ ಹೊರ ಹಾಕಿದರು. ಈ ಮಧ್ಯೆ, ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಿಯೇ ತೀರುತ್ತೇವೆ ಅಂತ ಎನ್‌ಡಿಎ ಸಂಸದರು ಶಪಥ ಮಾಡಿದ್ದಾರೆ. ಇಂದಲ್ಲ ನಾಳೆ ನಾವು ಈ ಮಸೂದೆಯನ್ನು ಜಾರಿಗೊಳಿಸ್ತೇವೆ ಅಂದಿದ್ದಾರೆ.


Spread the love

About Laxminews 24x7

Check Also

ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

Spread the loveನವದೆಹಲಿ: ಬುಧವಾರ ಅಯೋಧ್ಯೆಗೆ ಶ್ರೀರಾಮ ದೇವಸ್ಥಾನಕ್ಕೆ ರಾಜ್ಯದ 10 ಹಿರಿಯ ಕಾಂಗ್ರೆಸ್ ಶಾಸಕರು ಭೇಟಿ ನೀಡಲಿದ್ದಾರೆ. ಯಾರೆಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ