ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಶೇ 60ಕ್ಕಿಂತ ಕಡಿಮೆ ಬಿಲ್ ಪಾವತಿಸಿದ (ಫೆ.28ರ ವರೆಗೆ) 10 ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಆಯುಕ್ತರು ನೋಟಿಸ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳು 550 ಲಕ್ಷ ಟನ್ ಕಬ್ಬು ನುರಿಸಿ, 47.35 ಲಕ್ಷ ಟನ್ ಲಿ ಸಕ್ಕರೆ ಉತ್ಪಾದಿಸಿವೆ.
ಒಟ್ಟು ₹22,171 ಕೋಟಿ ಬಿಲ್ ಪಾವತಿಸಬೇಕಿದ್ದು,₹4,741 ಕೋಟಿ ಬಾಕಿ ಉಳಿಸಿಕೊಂಡಿವೆ.
‘ವಿವಿಧ ಕಾರ್ಖಾನೆಗಳು ಬಿಲ್ ಪಾವತಿಸಿದ ಪ್ರಮಾಣ ಶೇ 78ರಷ್ಟಿದೆ. ನೀವು ಶೇ 60ಕ್ಕಿಂತ ಕಡಿಮೆ ಬಿಲ್ ಏಕೆ ಪಾವತಿಸಿದ್ದೀರಿ? ಹಾಗಾದರೆ ನಿಮ್ಮ ಬಳಿ ಇರುವ ಸಕ್ಕರೆಯನ್ನು ನಾವು ವಶಕ್ಕೆ ಪಡೆದು ಹರಾಜು ಮಾಡಿ, ರೈತರಿಗೇಕೆ ಹಣ ಕೊಡಬಾರದು’ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ಕೃಷಿ ಇಲಾಖೆ ಜಂಟಿನಿರ್ದೇಶಕ, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮತ್ತು ತಹಶೀಲ್ದಾರ್ ಸೇರಿ ಮೂವರು ಅಧಿಕಾರಿಗಳ ತಂಡ ರಚಿಸಲಾಗಿದೆ. ತಂಡ ಆಯಾ ಕಾರ್ಖಾನೆಗೆ ಹೋಗಿ, ಕಬ್ಬು ನುರಿಸಿದ ಪ್ರಮಾಣ, ಸಕ್ಕರೆ ಉತ್ಪಾದನೆ ಪ್ರಮಾಣ, ಬಾಕಿ ಇರುವ ಬಿಲ್ ಮತ್ತಿತರ ಮಾಹಿತಿ ಸಂಗ್ರಹಿಸಿ ವರದಿ ಮಾಡಲಿದೆ. ಬಾಕಿ ನೀಡುವ ಪ್ರಕ್ರಿಯೆ ತ್ವರಿತಗೊಳಿಸಲು ಕ್ರಮ ವಹಿಸಲಿದೆ.
ವಿಜಯಪುರದಲ್ಲೇ ಹೆಚ್ಚು: ಶೇ 60ಕ್ಕಿಂತ ಕಡಿಮೆ ಬಿಲ್ ಪಾವತಿಸಿರುವ 10 ಕಾರ್ಖಾನೆಗಳಲ್ಲಿ
ವಿಜಯಪುರ ಜಿಲ್ಲೆಯಲ್ಲೇ ನಾಲ್ಕು ಇವೆ. ಬೀದರ್‌ನಲ್ಲಿ ಎರಡು, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಕಲಬುರಗಿಯಲ್ಲಿ ತಲಾ ಒಂದು ಕಾರ್ಖಾನೆ ಪಟ್ಟಿಯಲ್ಲಿವೆ.
ಮತ್ತೆ ಹೋರಾಟ: ಹಲವು ಕಾರ್ಖಾನೆಗಳು ಕಬ್ಬು ನುರಿಸುವ ಪ್ರಕ್ರಿಯೆ ಮುಗಿಸಿ ಎರಡು ತಿಂಗಳಾಗಿದೆ. 18 ಕಾರ್ಖಾನೆಗಳು ಇನ್ನುನುರಿಸುತ್ತಿವೆ. ಬಿಲ್ ಪಾವತಿಗೆ ಆಗ್ರಹಿಸಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ.
-ಚೂನಪ್ಪ ಪೂಜೇರಿ, ರೈತ ಮುಖಂಡಕಾರ್ಖಾನೆಗಳಿಗೆ ಮಾರ್ಚ್ 18ರವರೆಗೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ಬಾಕಿ ನೀಡದಿದ್ದರೆ, ಸರ್ಕಾರ ಸಕ್ಕರೆಯನ್ನು ಜಪ್ತಿ ಮಾಡಿ, ಬಿಲ್ ನೀಡಬೇಕು. -ಗೋವಿಂದರೆಡ್ಡಿ, ಸಕ್ಕರೆ ಆಯುಕ್ತಶೇ 60ಕ್ಕಿಂತ ಕಡಿಮೆ ಬಿಲ್ ಪಾವತಿಸಿದ ಕಾರ್ಖಾನೆಗಳಿಗೆ ನೋಟಿಸ್ ಕೊಟ್ಟು ಎಚ್ಚರಿಸಿದ್ದೇವೆ. ಉಳಿದ ಕಾರ್ಖಾನೆಗಳಿಗೂ ಬಾಕಿ ಬಿಲ್ ಪಾವತಿಸುವಂತೆ ಸೂಚಿಸಿದ್ದೇವೆ.
Laxmi News 24×7