Breaking News

ಅಂತರರಾಜ್ಯ ಕಳ್ಳರನ್ನು ಬಂಧಿಸಿ 6.11 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

Spread the love

ಬೆಳಗಾವಿ: ಹಾರೂಗೇರಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆಯಲ್ಲಿ ಮಹಾರಾಷ್ಟ್ರ ಮೂಲಕ 7 ಅಂತರರಾಜ್ಯ ಕಳ್ಳರನ್ನು ಬಂಧಿಸಿ, 29 ಲಕ್ಷ ರೂ. ಮೌಲ್ಯದ 267ಗ್ರಾಂ. ಚಿನ್ನಾಭರಣ ಸೇರಿದಂತೆ  ಒಟ್ಟು 36.11 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಡಲಾಗಿದೆ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಫೆ.7ರಂದು ರಾಯಬಾಗ ತಾಲೂಕಿನ ಹಾರೂಗೇರಿಯ ಅಭಿಷೇಕ ಪಾಂಡೆ ಎಂಬುವವರು ಮನೆಯಲ್ಲಿ ಒಟು ್ಟ 28 ತೊಲ ಚಿನ್ನಾಭರಣ, ಬೆಳ್ಳಿ ಪೂಜಾ ಸಾಮಗ್ರಿ 1ಕೆಜಿಯಷ್ಟು ಕಳ್ಳತನವಾದ ಬಗ್ಗೆ ದೂರು ದಾಖಲಿಸಿದ್ದರು. ಇದೇ ವೇಳೆ ಮತ್ತೊಂದಷ್ಟು ಕಡೆಯೂ ಕಳ್ಳತನಗಳಾಗಿದ್ದವು. ಇವರನ್ನು ಪತ್ತೆ ಮಾಡಲು ಹಾರೂಗೇರಿ, ಕುಡಚಿ ಮತ್ತು ಐಗಳಿ ಠಾಣೆಯ ಪೊಲೀಸರನ್ನು ಸೇರಿಸಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರ ರಾಜ್ಯ ದೇವನಂದ್ರಾದ ರವಿ ಶಿಂಧೆ, ಪಾಥರಿಯ ಸುನೀಲ ಪವಾರ, ಮಂಗರೂಲನ ಶಂಕರ ಜಾಧವ, ದಿಲೀಪ ಶಿಂಧೆ, ಕಿಶೋರ ಮೋರೆ, ಮಿಥುನ ಜಾಧವ ಹಾಗೂ ಪಿಟುರಿ ಶಿರಜಗಾಂವದ ವಿನೋದ ಶಿಂಧೆ ಬಂಧಿತರು. ಬಂಧಿತರಿಂದ 29 ಲಕ್ಷ ರೂ. ಮೌಲ್ಯದ 267ಗ್ರಾಂ ಚಿನ್ನಾಭರಣ, 3 ಲಕ್ಷ 2 ಸಾವಿರ ರೂ. ಮೌಲ್ಯದ 1.80 ಕೆಜಿ ಬೆಳ್ಳಿ ಸಾಮಗ್ರಿ, 3.50 ಲಕ್ಷ ರೂ. ಮೌಲ್ಯದ ಕಾರ, 50 ಸಾವಿರ ರೂ. ಮೌಲ್ಯದ 6 ಮೊಬೈಲ್, 9,830ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಬಂಧಿತರು ಅಥಣಿ, ಉಗಾರ, ರಬಕವಿ, ಚಿಕ್ಕಮಗಳೂರು, ಗುಲ್ಬರ್ಗಾ, ವಿಜಯಪೂರ, ಕೋಲಾರ, ಹರಪ್ಪನಹಳ್ಳಿ, ಚಿತ್ರದುರ್ಗ, ರಾಮನಗರ, ತುಮಕೂರ, ಬಾಗಲಕೋಟೆ, ದಾವಣಗೆರೆ, ಗದಗ, ಹಾಸನ, ಮುಂತಾದ ಕಡೆಗಳಲ್ಲಿ ಸಹ ಕಳ್ಳತನ ಮಾಡಿದ್ದು ಗಮನಕ್ಕೆ ಬಂದಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಐದು ಮತ್ತು ಬಾಗಲಕೋಟೆಯ ಎರಡು ಕೇಸ್‌ಗಳು ಸದ್ಯಕ್ಕೆ ಖಾತ್ರಿಯಾಗಿದೆ ಎಂದು ವಿವರಿಸಿದರು.
ಇವರು ವೃತ್ತಿನಿರತ ಕಳ್ಳರಾಗಿದ್ದು, ಎಲ್ಲೂ ಸಾಕ್ಷೃಗಳು ಸಿಗದಂತೆ ಮುಖಕ್ಕೆ ಮಾಸ್ಕ್ ಹಾಗೂ ಬೆರಳಚ್ಚು ಸಹ ಸಿಗದಂತೆ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು. ತಾವು ಬಳಸುವ ಮೊಬೈಲ್‌ಗಳನ್ನು 20 ಕಿಮೀ ದೂರದಲ್ಲೆ ಬಿಟ್ಟು ಬರುತ್ತಿದ್ದರು. ಹೀಗಾಗಿ ಇವರ ಪತ್ತೆ ದೊಡ್ಡ ಸವಾಲಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ನೋಡಿದಾಗ ಇವರು ಪಳಗಿದ ಕಳ್ಳರೆಂಬುದು ಗೊತ್ತಾಗಿತ್ತು. ಅದರ ಆಧಾರದ ಮೇಲೆಯೇ ನಮ್ಮ ತಂಡ ಇವರನ್ನು ಪತ್ತೆ ಮಾಡಿತ್ತು. ಆದರೆ ಇವರೆಲ್ಲ ವಾಸಿಸುತ್ತಿದ್ದ ಸ್ಥಳಕ್ಕೆ ಬಂಧಿಸಲು ಹೋದಲ್ಲಿ ಪೊಲೀಸರ ಮೇಲೆಯೇ ಸ್ಥಳೀಯರು ಹಲ್ಲೆ ಮಾಡುವಂತಹ ಸ್ಥಿತಿ ಇದೆ. ಅಲ್ಲಿ ಸ್ಥಳೀಯ ಪೊಲೀಸರು ಹೋಗುವುದಕ್ಕೆ ಹೆದರುತ್ತಾರೆ. ಇವರು ಹೊರ ಬರುವುದನ್ನು ಕಾಯುತ್ತ ನಮ್ಮ ತಂಡ ನಿರಂತರ ನಿಗಾ ಇಟ್ಟಿತ್ತು.  ಎಲ್ಲರೂ ಒಂದೇಡೆ ಸೇರಿ ಮತ್ತೊಂದು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಬಲೆ ಬೀಸಿ ಹಿಡಿದಿದ್ದಾರೆ. ಆರೋಪಿಗಳ ಪೈಕಿ ಸುನೀಲ ನಟೋರಿಯಸ್ ಕಳ್ಳನಾಗಿದ್ದು, ಈತನ ಮೇಲೆ ಡಕಾಯಿತಿ ಪ್ರಕರಣಗಳು ಹಾಗೂ ಕಳ್ಳತನ ಮಾಡಲು ಹೋಗಿದ್ದಾಗ ಮನೆಯೊಂದರಲ್ಲಿ ಕೊಲೆ ಮಾಡಿರುವ ಕೇಸ್ ಮಹಾರಾಷ್ಟ್ರದಲ್ಲಿದೆ ದಾಖಲಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ಎಸ್ಪಿ ಬಿ.ಆರ್.ಬಸರಗಿ, ಡಿಎಸ್‌ಪಿ ಪ್ರಶಾಂತ ಮುನ್ನೋಳಿ ಸುದ್ದಿಗೋಷ್ಠಿಯಲ್ಲಿದ್ದರು.

Spread the love

About Laxminews 24x7

Check Also

ಏ.14ರ ಅಂಬೇಡ್ಕರ್ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ

Spread the loveಬೆಳಗಾವಿ: ಪ್ರತಿ ವರ್ಷದಂತೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಬೇಡ್ಕರ್ ಉದ್ಯಾನವನದಲ್ಲಿ ಏಪ್ರಿಲ್ 14 ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ