Breaking News

ನಾಗರಮುನ್ನೋಳಿ ಪ್ರೌಢಶಾಲೆ ಉನ್ನತೀಕರಣ

Spread the love

ಚಿಕ್ಕೋಡಿ: ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಸಾಕ್ಷರತಾ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ತಾಲೂಕಿನ ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನಲೆ, ಈಚೆಗೆ ಗ್ರಾಮಸ್ಥರು ಅವರನ್ನು ಪಟ್ಟಣದ ಸ್ವಗೃಹ ಕಚೇರಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.  ನಾಗರಮುನ್ನೋಳಿ ಗ್ರಾಪಂ ಅಧ್ಯಕ್ಷ, ಸದಸ್ಯರು ಮುಖ್ಯಶಿಕ್ಷಕ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ಶಾಲೆ ಉನ್ನತೀಕರಿಸಲು ಮನವಿ ಸಲ್ಲಿಸಿದ್ದರು. ಬಡ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣಕ್ಕಾಗಿ ಮಜಲಟ್ಟಿ ಅಥವಾ ಚಿಕ್ಕೋಡಿಗೆ ಬರಬೇಕಿತ್ತು. ಇದರಿಂದ ಕೆಲ ಮಕ್ಕಳು ಎಸ್ಸೆಸ್ಸೆಲ್ಸಿ ಹಂತದಲ್ಲಿಯೇ ಶಿಕ್ಷಣ ಕೊನೆಗೊಳಿಸುತ್ತಿದ್ದರು. ಗ್ರಾಮಸ್ಥರ ಮನವಿಯಂತೆ ಸರ್ಕಾರ ಶಾಲೆಯನ್ನು ಉನ್ನತೀಕರಿಸಿದೆ ಎಂದರು.  ಮುಖಂಡ ಸಿದ್ದಪ್ಪ ಮರ‌್ಯಾಯಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ ಭಂಡಾರೆ ಇತರರಿದ್ದರು.

Spread the love

About Laxminews 24x7

Check Also

ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

Spread the loveಚಿಕ್ಕೋಡಿ:ಶಾಲೆಯಿಂದ ಮನೆಗೆ ಮರಳುತ್ತಿದ್ದ ಇಬ್ಬರು ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ