Breaking News

ಪ್ರಾದೇಶಿಕ ಪಕ್ಷ ಮಾಡಿ, 2028ಕ್ಕೆ ನಾನೇ ಮುಖ್ಯಮಂತ್ರಿ ಆಗ್ತೀನಿ – ಯತ್ನಾಳ್

Spread the love

ನವದೆಹಲಿ: ನಾನೇ ಪ್ರಾದೇಶಿಕ ಪಕ್ಷ ಮಾಡಿ, 2028ಕ್ಕೆ ಅಧಿಕಾರಕ್ಕೆ ಬಂದು ನಾನೇ ಮುಖ್ಯಮಂತ್ರಿ ಎಂದು ವಿಜಯಪುರ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಬಿಜೆಪಿ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಲು ನಾನು ದೆಹಲಿಗೆ ಬಂದಿಲ್ಲ. ಯಾರ ಕಾಲಿಗೆ ಬಿದ್ದು ಪಕ್ಷ ಸೇರಿಸಿಕೊಳ್ಳಿ ಅಂತಾ ಕೇಳಲ್ಲ. ನಾನೇ ಪ್ರಾದೇಶಿಕ ಪಕ್ಷ ಮಾಡ್ತೀನಿ, 2028ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿ ಆಗ್ತಿನಿ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ, ಯಾರೇ ಏನೇ ಸರ್ವೇ ಮಾಡಿದ್ರು ಅಧಿಕಾರಕ್ಕೆ ಬರಲಿದೆ. ಜೆಸಿಬಿ ಆಗುತ್ತೋ? ಏನಾಗುತ್ತೋ? ನೋಡೋಣ ನಮ್ಮ ಪಕ್ಷನೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. 

ರಾಜ್ಯದಲ್ಲಿ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ಪಕ್ಷ ಸೇರಲ್ಲ. ವಿಜಯೇಂದ್ರ, ಯಡಿಯೂರಪ್ಪ, ರಾಘವೇಂದ್ರರ ಕುಟುಂಬ ಇರುವವರೆಗೂ ನಾನು ಪಕ್ಷ ಸೇರಲ್ಲ. ನಾನು ಹೋಗಿ ಕೈ, ಕಾಲು ಹಿಡಿದು ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತಾ ಹೇಳುವ ಅವಶ್ಯಕತೆ ಇಲ್ಲ. ನಾವು ಸ್ವಾಭಿಮಾನದಿಂದ ಬದುಕಿರುವವರು. ಭ್ರಷ್ಟ ಕುಟುಂಬದ ನೇತೃತ್ವ ನಾವು ಒಪ್ಪಲ್ಲ. ಭ್ರಷ್ಟ ಕುಟುಂಬ ಎಲ್ಲಿವರೆಗೆ ಇರುತ್ತೋ ಅಲ್ಲಿವರೆಗೂ ಬಿಜೆಪಿ ಸೇರುವ ಪ್ರಶ್ನೆ ಉದ್ಭವಿಸಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಅಂತಾ ಯಾರ ಬಳಿಯೂ ಹೋಗಲ್ಲ. ನಾನು ಅಷ್ಟರಲ್ಲಿ ಪ್ರಾದೇಶಿಕ ಪಕ್ಷ ಮಾಡ್ತಿನಿ ಕಾದು ಕೂರಲು ಹುಚ್ಚನಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಮಗನ ಮದುವೆ ನಿಮಿತ್ತ ದೆಹಲಿಗೆ ಬಂದಿದ್ದೇನೆ. ಕೆಲವು ಹಳೆಯ ಸ್ನೇಹಿತರ ಭೇಟಿಗೆ ಬಂದಿದ್ದೇನೆ. ಯಾವ ಬಿಜೆಪಿ ನಾಯಕರನ್ನು ಭೇಟಿ ಮಾಡಲ್ಲ, ಪಕ್ಷದ ಸೇರುವ ಬಗ್ಗೆ ಚರ್ಚೆ ಮಾಡಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ನಮ್ಗೆ 1 ವೋಟು, ಅಂಬಾನಿಗೆ 1 ಲಕ್ಷ ವೋಟ್‌ ಇರುತ್ತಾ? – ವಿಪಕ್ಷಗಳಿಗೆ ತೇಜಸ್ವಿ ಸೂರ್ಯ ತರಾಟೆ

Spread the loveನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕ್ಷೇತ್ರ ಪುನರ್‌ವಿಂಗಡಣೆಗಾಗಿ ಸಂವಿಧಾನ (131ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ