Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

Spread the love

ಚಿಕ್ಕೋಡಿ: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ನೂತನ ಪ್ರವಾಸಿ ಮಂದಿರ ಹಾಗೂ ಅಂಬೇಡ್ಕರ್ ಭವನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2,652 ಕೋಟಿ ನಷ್ಟವನ್ನು ಕೆ.ಎಸ್.ಆರ್.ಟಿ.ಸಿ ಅನುಭವಿಸುತ್ತಿದೆ. ಆದರೂ ಸಂಸ್ಥೆಯ 1 ಲಕ್ಷ 30 ಸಾವಿರ ಸಿಬ್ಬಂದಿಗೆ ವೇತನ ನೀಡಲಾಗುವುದು ಎಂದರು.ಪ್ರತಿ ತಿಂಗಳು 126 ಕೋಟಿ ಸಿಬ್ಬಂದಿ ವೇತನವನ್ನು ನೀಡಬೇಕಾಗುತ್ತದೆ. ಮುಖ್ಯಮಂತ್ರಿಗಳು 326 ಕೋಟಿ ನೀಡಿದ್ದು, ಸಿಬ್ಬಂದಿಯ 2 ತಿಂಗಳ ವೇತನ ನೀಡಲಾಗಿದೆ. ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ಪಡೆಯುವಂತೆ ಒತ್ತಾಯ ಹಾಕುತ್ತಿಲ್ಲ. ಯಾವುದೇ ಕಾರಣಕ್ಕೂ ಸಿಬ್ಬಂದಿಯ ವೇತನವನ್ನು ಸರಕಾರ ತಡೆ ಹಿಡಿಯಲ್ಲ ಎಂದು ಸವದಿ ಅವರು ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಅಭಯ ನೀಡಿದ್ದಾರೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ