Breaking News

ಹುಕ್ಕೇರಿಮಠ ಜಾತ್ರಾ ಸಂಭ್ರಮ: ಮದುವಣಗಿತ್ತಿಯಂತೆ ಸಿಂಗಾರಗೊಂಡ ಹಾವೇರಿ

Spread the love

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಖ್ಯಾತಿಯ ಹಾವೇರಿ ಜಿಲ್ಲೆಯಲ್ಲಿ ಇದೀಗ ಹುಕ್ಕೇರಿಮಠ ಜಾತ್ರೆಯದ್ದೇ ಸುದ್ದಿ. ಹುಕ್ಕೇರಿಮಠದ ಜಾತ್ರೆಗಾಗಿ ಹಾವೇರಿ ನಗರ ನವವಧುವಿನಂತೆ ಸಿಂಗಾರಗೊಂಡಿದೆ. ನಗರದ ಪ್ರಮುಖ ರಸ್ತೆಗಳು ಪ್ರಮುಖ ವೃತ್ತಗಳು ಕೇಸರಿಮಯವಾಗಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್​ಗಳು ರಾರಾಜಿಸುತ್ತಿವೆ.

ಈ ಮಧ್ಯೆ ಪ್ರಸ್ತುತ ವರ್ಷ ಹುಕ್ಕೇರಿಮಠದ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಮಠ ನಿರ್ಧರಿಸಿದೆ. ಹಾವೇರಿ ಮರಿಕಲ್ಯಾಣ ಎಂದೇ ಖ್ಯಾತಿ ಪಡೆದಿದೆ. ಬಸವಣ್ಣನವರ ಕಾಲದಲ್ಲಿ ಕಲ್ಯಾಣದಲ್ಲಿ 64 ಮಠಗಳಿದ್ದರೆ, ಹಾವೇರಿ ನಗರ ಒಂದರಲ್ಲಿಯೇ 63 ಮಠಗಳಿವೆ. ಈ ಹಿನ್ನೆಲೆಯಲ್ಲಿ ಹಾವೇರಿಗೆ ಮರಿ ಕಲ್ಯಾಣ ಅಥವಾ ಎರಡನೇ ಕಲ್ಯಾಣ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಏಲಕ್ಕಿ ಕಂಪಿನ ನಗರ ಎಂದು ಕರೆಸಿಕೊಂಡಿರುವ ಹಾವೇರಿ ಇದೀಗ ಕೇಸರಿ ದ್ವಜಗಳಿಂದ ಕಂಗೊಳಿಸುತ್ತಿದೆ. ಸದಾಶಿವ ಶ್ರೀಗಳ ದೊಡ್ಡ ಕಟೌಟ್ ಸೇರಿದಂತೆ ಶುಭಾಶಯ ಕೋರುವ ಭಕ್ತರ ಬ್ಯಾನರ್‌ಗಳು ಊರಿನಾದ್ಯಂತ ರಾರಾಜಿಸುತ್ತಿವೆ.Hukkeri Math Jathra Celebration

ಐದು ಲಕ್ಷ ಭಕ್ತರಿಗೆ 5 ಲಕ್ಷ ರುದ್ರಾಕ್ಷಿ ಧಾರಣೆ: ಹಾವೇರಿ ಹುಕ್ಕೇರಿಮಠದ ಈ ವರ್ಷದ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಡಿ. 30 ರಂದು ಲಿಂಗೈಕ್ಯ ಶಿವಬಸವ ಶ್ರೀ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರದ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ. ನ.6 ರಿಂದಲೇ ಹುಕ್ಕೇರಿಮಠದ ಸದಾಶಿವ ಶ್ರೀಗಳು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ.

ಹಾವೇರಿ ತಾಲೂಕಿನ ಗ್ರಾಮಗಳು ಸೇರಿದಂತೆ ಸುಮಾರು 75 ಗ್ರಾಮಗಳಲ್ಲಿ ಶ್ರೀಗಳು ಪಾದಯಾತ್ರೆ ನಡೆಸಿದ್ದಾರೆ. ಹಾವೇರಿ ನಗರದಲ್ಲಿ ಸಹ ಶ್ರೀಗಳು ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆ ವೇಳೆ ಗ್ರಾಮಸ್ಥರಲ್ಲಿ ಸದ್ಗುಣಗಳ ದೀಕ್ಷೆ ದುರ್ಗುಣಗಳ ಭೀಕ್ಷೆ ಕಾರ್ಯಕ್ರಮ ನಡೆಸಿದ್ದಾರೆ. ಗ್ರಾಮಗಳಲ್ಲಿ ದುಶ್ಚಟಗಳಿಗೆ ಬಲಿಯಾಗಿರುವ ಯುವಕರಿಗೆ ತಿಳಿ ಹೇಳಿ ಮತ್ತೆ ಸಮಾಜಮುಖಿಯನ್ನಾಗಿಸಿ ಶ್ರೀಗಳು ಮಾಡಿದ್ದಾರೆ. ಇದರ ಜೊತೆಗೆ ಪಾದಯಾತ್ರೆ ಉದ್ದಕ್ಕೂ ಶ್ರೀಗಳು ರುದ್ರಾಕ್ಷಿಧಾರಣೆ ಮಾಡಿಸಿದ್ದಾರೆ. ಸುಮಾರು 5 ಲಕ್ಷ ಭಕ್ತರಿಗೆ ಐದು ಲಕ್ಷ ರುದ್ರಾಕ್ಷಿಧಾರಣೆ ಮಾಡಿಸಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ