ಸತೀಶ ಪ್ರತಿಭಾ ಪುರಸ್ಕಾರವೂ ವಿದ್ಯಾರ್ಥಿ ಭವಿಷ್ಯ ಬೆಳಗುತ್ತಿದೆ: ನಿಡಸೋಶಿ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜೀ
12ನೇ ಸತೀಶ ಪ್ರತಿಭಾ ಪುರಸ್ಕಾರದ ಎರಡನೇ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಪೂಜ್ಯರಿಂದ ಆಶೀರ್ವಚನ
ಈ ಸಂದರ್ಭದಲ್ಲಿ 12ನೇ ಸತೀಶ ಪ್ರತಿಭಾ ಪುರಸ್ಕಾರದ ಎರಡನೇ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು, ಬಹುಮಾನ ವಿತರಿಸಿ, ಪುರಸ್ಕರಿಸಿದರು.
ಯಮಕನಮರಡಿ: ಸತೀಶ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ಗ್ರಾಮೀಣ ಭಾಗದ ವಿದ್ಯಾರ್ಥಿ ಭವಿಷ್ಯ ಬೆಳೆಗಿಸುವ ಕಾರ್ಯವಾಗಿದೆ. ಯುವ ಪ್ರತಿಭೆಗಳು ಇಲ್ಲಿನ ಅವಕಾಶ ಸದ್ಬಳಿಕೆ ಮಾಡಿಕೊಂಡು ಉತ್ತರ ಕರ್ನಾಟಕ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ನಿಡಸೋಶಿ ಸಿದ್ಧ ಸಂಸ್ಥಾನ ಮಠ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜೀ ಅವರು ಆಶೀರ್ವದಿಸಿದರು
.
ಗ್ರಾಮದ ಎನ್‌ಎಸ್‌ಎಫ್ ಶಾಲಾ ಆವರಣದಲ್ಲಿ ಭಾನುವಾರ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾದ 12ನೇ ಸತೀಶ ಪ್ರತಿಭಾ ಪುರಸ್ಕಾರದ ಎರಡನೇ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು,
ನೂರಾರು ಕ್ಷೇತ್ರ ಸುತ್ತಾಡಿ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಲ್ಲಿಣರಾಗಿರುವ ಸಚಿವ ಸತೀಶ ಜಾರಕಿಹೊಳಿ ಅವರು, ಮಕ್ಕಳಿಗಾಗಿ ಸಾಂಸ್ಕೃತಿಕ, ಜಾನಪದ, ನೃತ್ಯ, ಭಾಷಾ ಶಕ್ತಿ ಹೆಚ್ಚಿಸಿಕೊಳಬೇಕೆಂಬ ಉದ್ದೇಶದಿಂದ ಕಳೆದ 12 ವರ್ಷಗಳಿಂದ ಸತೀಶ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮನ್ನು ಆಯೋಜಿಸಿ, ಯಶಸ್ಸಿಗೊಳಿಸಿದ್ದಾರೆ.
ಹಳೆ ಮೈಸೂರ ಭಾಗದ ಕಾರ್ಯಕ್ರಮಗಳ ರೀತಿಯಲ್ಲಿ ಉತ್ತರ ಕರ್ನಾಟಕದ ಯಮಕನಮರಡಿಯಲ್ಲಿ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿವೆ. ಕಲೆ, ಸಾಂಸ್ಕೃತಿ, ಜಾನಪದಗಳಿಗೆ ಸಚಿವರು ಹೆಚ್ಚಿನ ಒತ್ತು ನೀಡಿದ್ದಾರೆ. ಇವಾಗಿನಿಂದ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದೊಂದಿದೆ ಸಂಸ್ಕಾರ, ಸಂಸ್ಕೃತಿಯನ್ನು ನೀಡದರೆ ಮುಂದಿನ ದಿನಗಳ ಭವಿಷ್ಯ ಬೆಳೆಗಲಿದೆ ಎಂಬ ಉದ್ದೇಶದಿಂದ ಬೇರು ಹಿಡಿಕೊಂಡಿದ್ದಾರೆ. ಮಕ್ಕಳು ಹಾಗೂ ಯುವಕರು ಈ ದೇಶದ ಬೇರು ಅವರ ಭವಿಷ್ಯ ಬೆಳಗಿಸಲು ಸಚಿವರು ನಿರಂತರ ಶ್ರಮಿಸುತ್ತಿದ್ದಾರೆ ಅವರಿಗೆ ನಿಮ್ಮ ಸಹಕಾರ ಅಗತ್ಯವಾಗಿದೆ ಎಂದು ಶ್ರೀಗಳು ಹೇಳಿದರು.
ಇಂತಹ ಭವ್ಯ ಸಂಸ್ಕೃತಿ ಕಾರ್ಯಕ್ರಮಗಳು ಯಮಕನಮರಡಿ ಕ್ಷೇತ್ರದಲ್ಲಿ ಆಯೋಜಿಸುತ್ತಿರುವ ಈ ಭಾಗದ ಮಕ್ಕಳು ಸೌಭಾಗ್ಯವಾಗಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಉ. ಖಾನಾಪುರ ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಈ ವರ್ಷ ಸತೀಶ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ಅತೀ ವೈಭವದಿಂದ ಕೊಡಿದೆ. ಜನಪದ ಸಾಹಿತ್ಯದಲ್ಲಿ ಧರ್ಮವೂ ಕೂಡ ಅಡಕವಾಗಿದೆ. ಜನಪದ ಸಾಹಿತ್ಯದ ಭಾಷೆಯಲ್ಲಿ ಯಾವುದೇ ಬೇದವಿಲ್ಲ, ಜನಪದ ಸಾಹಿತ್ಯ ಪ್ರಾಮುಖ್ಯತೆ ಹೊಂದಿದೆ ಎಂಬುವುದು ಈ ಕಾರ್ಯಕ್ರಮದಿಂದ ಭಾಷವಾಗಿದೆ. ಎಲೆ ಮರೆಯಂತೆ ಇರುವ ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟಕ್ಕೆ ಪರಿಚಯಸುವ ಕಾರ್ಯವು ಸತೀಶ ಪುರಸ್ಕಾರ ವೇದಿಕೆ ಆಗಿದೆ ಎಂದು ಶ್ರೀಗಳು ಹೇಳಿದರು.
ಹುಕ್ಕೇರಿ ಜಾರಿಗುಡ್ಡದ ಶ್ರೀ ಅಭಿನವ ಮಂಜುನಾಥ ಸ್ವಾಮೀಜಿಯವರು ಮಾತನಾಡಿ, ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಸತೀಶ ಪುರಸ್ಕಾರ ವೇದಿಕೆಯಿಂದ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಗ್ರಾಮೀಣ ಭಾಗದ ಮಕ್ಕಳನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೊಯುವ ಅಪರೂಪದ ಕಾರ್ಯಕ್ರಮ ಯಮಕನಮರಡಿ ಕ್ಷೇತ್ರದಲ್ಲಿ ನಡೆಯುತ್ತಿದೆ. ರಾಜ್ಯ ರಿಯಾಲಿಟಿ ಶೋಗಳಾದ ಡಿಕೆಡಿ, ಸಂಗೀತ ಕಾರ್ಯಕ್ರಮಗಳಲ್ಲಿ ಮಕ್ಕಳು ಗುರುತ್ತಿಸುವ ಕಾರ್ಯವೂ ಈ ವೇದಿಕೆ ಆಗುತ್ತಿದೆ. ಈ ಕಾರ್ಯಕ್ರಮವೂ ಎಲ್ಲಿವರೆಗೂ ಬೆಳೆದಿದೆ ಎಂದರೆ, ಹುಕ್ಕೇರಿಯಲ್ಲಿ ಹೊಡೆದ ಚಪ್ಪಾಳೆ ದೆಹಲಿಯ ಗದುಗೆ ಮುಟ್ಟುವಂತಾಗಿದೆ ಎನ್ನುವುದು, ಎಲ್ಲ ರಂಗದಲ್ಲಿಯೂ ಹಾಸು ಹೊಕ್ಕಾಗಿದೆ ಎಂದು ಶ್ರೀಗಳು ಹೇಳಿದರು.
12ನೇ ಸತೀಶ ಪ್ರತಿಭಾ ಪುರಸ್ಕಾರದ ಪ್ರಶಸ್ತಿ ವಿಜೇತರ ಫಲಿತಾಂಶ
ಯಮಕನಮರಡಿ ಫ್ರೌಡ ಭಾಷಣ ಸ್ಪರ್ಧೆ ವಿಜೇತರ ಫಲಿತಾಂಶ:- 1) ಸಂಕೇಶ್ವರ ಅಕ್ಕಮಹಾದೇವಿ ಕನ್ಯಾ ಶಾಲೆ ವಿದ್ಯಾರ್ಥಿನಿ ಐಶ್ವರ್ಯಾ ಮಾನೆ ಪ್ರಥಮ, 2) ಅರ್ಜುನವಾಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ವಪ್ನಾ ಶಂ ಗುಗ್ಗರಿ ದ್ವೀತಿಯ3) ಉ. ಖಾನಾಪೂರ ಶ್ರೀ ಡಿ.ಬಿ.ಹೆಬ್ಬಾಳಿ ಕರ್ನಾಟಕ ಪಬ್ಲಿಕ ಶಾಲೆಯ ವಿದ್ಯಾಶ್ರೀ ಎಂ ಮಾಳಗಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಯಮಕನಮರಡಿ ಕಾಲೇಜು ಭಾಷಣ ಸ್ಪರ್ಧೆ ವಿಜೇತರ ಫಲಿತಾಂಶ: 1)
ಹಿಡಕಲ್ ಡ್ಯಾಂ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜ ವಿದ್ಯಾರ್ಥಿನಿ ಪಾರ್ವತಿ ಗಂಡೋಳಿ ಪ್ರಥಮ, 2)ಯಮಕನಮರಡಿ ಶ್ರೀ ಗುರು ರಾಜೋಟಿ ಮಹಾಸ್ವಮಿಗಳು ಹುಣಸಿಕೋಳ್ಳಮಠ. ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜ ವಿದ್ಯಾರ್ಥಿನಿ ಸಂಧ್ಯಾ ನಾವಿ ದ್ವೀತಿಯ, 3) ನಿಡಸೋಸಿ SNJP SNMS ಕಂಪ್ಯೂಟರ, ಸಾಯನ್ನ ಮತ್ತು ವಾಣಿಜ್ಯ ಪದವಿಪೂರ್ವ ಮಹಾ ವಿದ್ಯಾಲಯ ವಿದ್ಯಾರ್ಥಿನಿ ಸಮೃದ್ಧಿ ಪವಾರ ಸ್ಥಾನ ಪಡೆದುಕೊಂಡಿದ್ದಾರೆ.
ಯಮಕನಮರಡಿ ಕಾಲೇಜು ಜಾನಪದ ಗಾಯನ ಸ್ಪರ್ಧೆ ವಿಜೇತರ ಫಲಿತಾಂಶ:-1) ಸಂಕೇಶ್ವರ LK ಖೋತ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿನಿ ಅಂಕಿತಾ ಕುಗಟೋಳಿ ಪ್ರಥಮ, 2)
ಹುಕ್ಕೇರಿ ಭರತೇಶ ಪ್ಯಾರಾ ಮೆಡಿಕಲ ವಿಜ್ಞಾನ ಕಾಲೇಜ ವಿದ್ಯಾರ್ಥಿನಿ ಸ್ನೇಹಾ ಬಡಿಗೇರ ದ್ವೀತಿಯ, 3) ಹಿಡಕಲ್ ಡ್ಯಾಂ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜನ ವಿದ್ಯಾರ್ಥಿನಿ ರಾಣಿ ಪತ್ತಾರ ತೃತೀಯ ಸ್ಥಾನ ಪಡುಕೊಂಡಿದ್ದಾರೆ.
ಯಮಕನಮರಡಿ ಫ್ರೌಡಶಾಲಾ ಗಾಯನ ಸ್ಪರ್ಧೆ ವಿಜೇತರ ಫಲಿತಾಂಶ:-01) ಶಿರಗಾಂವ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸೃಷ್ಟಿ ಅ ಮುನ್ನೋಳಿ ಪ್ರಥಮ, 2) ಹತ್ತರಗಿ-ಆನಂದಪುರ ಎನ್.ಎಸ್.ಎಫ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪುಷ್ಪಾ ಮಾ ಬಡಿಗೇರ ದ್ವೀತಿಯ, 3) ಹುಕ್ಕೇರಿ ಶ್ರೀ ಮಹಾವೀರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿ ಮನೀಶ ಮುರಗೇಶ ವಾಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಯಮಕನಮರಡಿ ಕಾಲೇಜು ಸಮೋಹ ನೃತ್ಯ ಸ್ಪರ್ಧೆ ವಿಜೇತರ ಫಲಿತಾಂಶ:-1) ಯಮಕನಮರಡಿ ಶ್ರೀ ಗುರು ರಾಜೋಟಿ ಮಹಾಸ್ವಮಿಗಳು ಹುಣಸಿಕೋಳ್ಳಮಠ. ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜ ವಿದ್ಯಾರ್ಥಿನಿ ಸೃಷ್ಟಿ ಕಾಂಬಳೆ ಹಾಗೂ ಸಂಗಡಿಗರು ಪ್ರಥಮ, 2) ಹುಕ್ಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜ ವಿದ್ಯಾರ್ಥಿನಿ ಆಶಾ ಪಾಟೀಲ ಹಾಗೂ ಸಂಗಡಿಗರು ದ್ವೀತಿಯ, 3) ನಿಡಸೋಸಿ SNJP SNMS ಕಂಪ್ಯೂಟರ, ಸಾಯನ್ನ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯ ವಿದ್ಯಾರ್ಥಿ ಸಂದೀಪ ಪಾಟೀಲ ಹಾಗೂ ಸಂಗಡಿಗರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಯಮಕನಮರಡಿ ಪ್ರಾಥಮಿಕ ಶಾಲಾ ಜನಪದ ನೃತ್ಯ ಸ್ಪರ್ಧೆ ವಿಜೇತರ ಫಲಿತಾಂಶ:-1) ಗೋಟೂರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಾಕ್ಷೀ ಕಮತೆ ಹಾಗೂ ಸಂಗಡಿಗರು ಪ್ರಥಮ, 2) ಪರಕನಟ್ಟಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಶಿರೂರ ಹಾಗೂ ಸಂಗಡಿಗರು ದ್ವಿತೀಯ, 3) ಮನಗುತ್ತಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ವಿದ್ಯಾರ್ಥಿನಿ ವೈಷ್ಣವಿ ಬೆಣ್ಣೆ ಹಾಗೂ ಸಂಗಡಿಗರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಯಮಕನಮರಡಿ ಫ್ರೌಡಶಾಲಾ ಸಮೋಹ ನೃತ್ಯ ಸ್ಪರ್ಧೆ ವಿಜೇತರ:1) ಉ-ಖಾನಾಪೂರ ಶ್ರೀ ಡಿ ಬಿ ಹೆಬ್ಬಾಳಿ ಕೆ.ಪಿ.ಎಸ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನಾ ಎಸ್ ಚೌಗಲಾ ಹಾಗೂ ಸಂಗಡಿಗರು ಪ್ರಥಮ, 2) ಹತ್ತರಗಿ- ಆನಂದಪೂರ ಎನ್ ಎಸ್ ಎಫ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಚೌಗಲಾ ಹಾಗೂ ಸಂಗಡಿಗರು ದ್ವೀತಿಯ, 3) ಗುಡಗನಹಟ್ಟಿ ಆರ್.ಸಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ಕ. ಘಸ್ತಿ ಹಾಗೂ ಸಂಗಡಿಗರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಂಘಟಕರಾದ ಯುವ ಮುಖಂಡ ಕಿರಣಸಿಂಗ್ ರಜಪೂತ , ರವೀಂದ್ರ ಜಿನರಾಳಿ , ಈರಣ್ಣಾ ಬಿಸಿರೊಟ್ಟಿ , ದಸ್ತಗೀರ ಬಸ್ಸಾಪೂರೆ, ಶಿವಶಂಕರ ಜುಟ್ಟಿ, ಸಿದ್ದಪ್ಪ ಶಿಳಿ, ಗಿರೀಶ ಮಿಶ್ರಕೋಟಿ, ಜಾವಿದ್ ಜಖಾತಿ , ಶಂಶಿಕಾಂತ ಹಟ್ಟಿ, ಪ್ರಾರ್ಚಾರ ಶಿವಗೌಡಾ ಅತ್ಯಾಳಿ, ಗುಲಾಬಸಿಂಗ್ ರಜಪೂತ, ನಿಂಗಪ್ಪ ಕೊಚರಗಿ, ಸಮೀರ್ ಬೇಪಾರಿ ಇತರರು ಇದ್ದರು.
Laxmi News 24×7