ಬೃಹತ್ ಗಾಂಜಾ ಪ್ರಕರಣ ಬೇಧಿಸಿದ ಬೆಳಗಾವಿಯ ನಗರ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ….50ಕೆಜಿ ಗಾಂಜಾ ಪ್ರಕರಣ ಭೇದಿಸಿದ ಬೆಳಗಾವಿಯ ಖಾಕಿ ಪಡೆಗಾಂಜಾ ಜಾಲವನ್ನು ಬುಡಸಮೇತ ಕಿತ್ತು ಹಾಕಲಾಗುವುದುಜಾಲದಲ್ಲಿರುವ ವ್ಯಕ್ತಿಗಳ ಪತ್ತೆಗೆ ಮೂಹರ್ತವಿಟ್ಟ ಕಮೀಷನರ್
ಜಾಲವನ್ನು ಬೇಧಿಸಿದ ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ
ಬೆಳಗಾವಿ-ಚಂದಗಡ ರಸ್ತೆಯಲ್ಲಿರುವ ದಾಭಾ ಒಂದರ ಬಳಿ ಕಾರ ಪರಿಶೀಲನೆ ನಡೆಸಿದಾಗ ಆರು ಜನ ಆರೋಪಿಗಳು ಸುಮಾರು 50 ಕೆಜಿಯಷ್ಟು ಗಾಂಜಾದೊಂದಿಗೆ ಸಿಕ್ಕಿ ಬಿದ್ದಿರುವದಾಗಿ ಬೆಳಗಾವಿ ನಗರ ಪೊಲೀಸ್ ಕಮೀಷನರ್ ಭೂಷಣ ಬೊರಸೆ ಹೇಳಿದರು.
ಶುಕ್ರವಾರ ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಮೀಷನರ್ ಭೂಷಣ ಬೊರಸೆ ಅವರು, ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಎರಡು ಕಾರಿನಲ್ಲಿ ಬರುತ್ತಿದ್ದ ಗಾಂಜಾ ಧಂಧೆಯಲ್ಲಿ ಇಸ್ಮಾಯಿಲ್ ಹಾಗೂ ತಾಜೀರ್ ಎಂಬ ಆರೋಪಿಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಅತಿದೊಡ್ಡ ಗಾಂಜಾ ಜಾಲ ಬಯಲಿಗೆ ಬಂದಿದೆ.
ಮಹಾರಾಷ್ಟ್ರದ ಕೊಲ್ಹಾಪುರದ ಪ್ರಥಮೇಶ, ಶಿವಕುಮಾರ ಅಸಾಬೆ, ಸಾತಾರಾದ ರಂಜಾನ್ ಜಮಾದಾರ, ಹುಕ್ಕೇರಿ ತಾಲೂಕಿನ ತೇಜಸ ವಜಾರೆ, ಸೇರಿದಂತೆ ಒಟ್ಟು ಆರು ಜನ ಆರೋಪಿಗಳು ಸೇರಿಕೊಂಡು ಸಾಗಿಸುತ್ತಿದ್ದ ಸುಮಾರು 50 ಕೆಜಿ ಗಾಂಜಾದೊಂದಿದೆ ಸಿಕ್ಕಿ ಬಿದ್ದಿದ್ದಾರೆ. ಅದಲ್ಲದೇ ಇವರ ಬಳಿಯಿದ್ದ 10 ಮೊಬೈಲ್ ಗಳು, ಒಂದು ಮಚ್ಚು, ಒಂದು ತೂಕದ ಮಷಿನ್, 4000/- ರೂ ನಗದು ವಶಕ್ಕೆ ಪಡೆದು ಕೃತ್ಯಕ್ಕೆ ಬಳಿಸಿದ ಮೂರು ಕಾರನ್ನು ಪೊಲೀಸರು ಜಪ್ತ ಮಾಡಿ ಈ ಪ್ರಕರಣಕ್ಕೆ ಸಂಭಂದಿಸಿದಂತೆ ಒಟ್ಟು 50ಕ್ಕೂ ಹೆಚ್ಚು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುದಾಗಿ ಕಮೀಷನರ್ ತಿಳಿಸಿದರು. ಮೊದಲ ಬಾರಿಗೆ ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಹಾಗೂ ದಲ್ಲಾಳಿ ಇಸ್ಮಾಯಿಲ್ ಅಲಿಯಾಸ್ ಸದ್ದಾಮ್ ನನ್ನು ಪೊಲೀಸರು ಬಂಧಿಸಿದ್ದು, ಈತ ಮಧ್ಯಪ್ರದೇಶ ಹಾಗೂ ಓಡಿಸ್ಸಾದಿಂದ ಗಾಂಜಾ ತಂದು ಮಾರುತ್ತಿದ್ದ, ಹಾಗೂ ಪುಣೆ ಮತ್ತು ಮುಂಬೈನಿಂದ ಹೆರಾಯಿನ ಪೂರೈಕೆ ಮಾಡುತ್ತಿರುವುದಾಗಿ ತಿಳಿದಿದೆ.
ಈ ಗಾಂಜಾ ದಾಳಿಯು ಇಲ್ಲಿಯವರೆಗೆ ನಡೆದಿರುವ ಅತಿ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಸಿ.ಇ.ಎನ್ ಇನ್ಸ್ಪೆಕ್ಟರ್ ಬಿ ಆರ್ ಗಡ್ಡೆಕರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಸುಮಾರು ದಿನಗಳಿಂದ ಬೆನ್ನಟ್ಟಿ ನಡೆಸಲಾಗಿದೆ. ಈ ಪ್ರಕರಣ ಭೇದಿಸುದಕ್ಕಾಗಿ ಪಿಐ ಗಡ್ಡೆಕರ ಮುಂಬೈ ಹಾಗೂ ಇತರೆ ನಗರಗಳನ್ನು ಸುತ್ತಾಡಿ ಖಚಿತ ಮಾಹಿತಿ ಪಡೆದು ದಾಳಿಯ ರೂಪರೇಷೆಯನ್ನು ರಚಿಸಿ ಕೊನೆಗೆ ಒಂದು ದೊಡ್ಡ ಸಮಾಜ ಘಾತುಕ ಕೃತ್ಯವನ್ನು ಸೆದೆಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಅಲ್ಲದೇ ಈ ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನ ಘೋಷಿಸಿಸುವದಾಗಿ ತಿಳಿಸಿದರು
ಪುಟ್ಟ ಚಲನಚಿತ್ರ ನೋಡಿಕೊಂಡು ಎಲ್ಲರೂ ಗ್ಯಾಂಗ್ ಸ್ಟಾರ್ ಆಗಲು ಸಾಧ್ಯವಿಲ್ಲ. ಈಗ ಬಂಧಿಸಿರುವ ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲಗಳನ್ನು ವಿಧಿವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಿ ಗಾಂಜಾ ಜಾಲದ ಸಂಕರ್ದಲ್ಲಿರುವ ಆರೋಪಿಗಳ ಪತ್ತೆ ಹಚ್ಚಿ ಬಂಧಿಸಲಾಗುವುದು. ರಾಷ್ಟ್ರ ಮಟ್ಟದಲ್ಲಿ ಜಾಲ ಹೊಂದಿರುವ ಶಂಕೆಯನ್ನು ವ್ಯಕ್ತಪಡಿಸಿದ ಕಮೀಷನರ್ ಅವರು, ಗಾಂಜಾ ಜಾಲವನ್ನು ಬುಡಸಮೇತ ಕಿತ್ತು ಹಾಕಲಾಗುವುದೆಂದು ತಿಳಿಸಿದರು.
ಡಿಸಿಪಿ ನಾರಾಯಣ ಭರಮನಿ, ಅಪರಾದ ಮತ್ತು ಸಂಚಾರ ವಿಭಾಗದ ಡಿಸಿಪಿ ಹಾಗೂ ಸಿ.ಇ.ಎನ್ ಇನ್ಸ್ಪೆಕ್ಟರ್ ಬಿ ಆರ್ ಗಡ್ಡೆಕರ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
Laxmi News 24×7