Breaking News

2ನೇ ದಿನವೂ ನಡೆದ ಶವಗಳ ಪತ್ತೆ ಕಾರ್ಯಾಚರಣೆ

Spread the love

ಬೆಳ್ತಂಗಡಿ(ದಕ್ಷಿಣ ಕನ್ನಡ): ಅನಾಮಧೇಯ ವ್ಯಕ್ತಿಯೋರ್ವ ತಾನು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರವೂ ಆತ ಗುರುತಿಸಿದ ಸ್ಥಳದಲ್ಲಿ ಅಗೆಯುವ ಕಾರ್ಯ ಮುಂದುವರಿದಿದೆ.

ಸೋಮವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳ ಸಮ್ಮುಖದಲ್ಲಿ ಅನಾಮಧೇಯ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಕ್ಕೆ ಮಾರ್ಕಿಂಗ್ ಮಾಡಲಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ.

ಪತ್ತೆಯಾಗದ ಅಸ್ಥಿಪಂಜರ: ಮಂಗಳವಾರ ಆತ ನೀಡಿದ ಮೊದಲು ಗುರುತು ಮಾಡಿದ ಸ್ಥಳದಲ್ಲಿ ಕಾರ್ಮಿಕರಿಂದ ನೆಲ ಅಗೆಸಲು ಪ್ರಯತ್ನಿಸಲಾಗಿತ್ತು. ಆದರೆ ನೀರಿನ ಒರತೆ, ಮಳೆಯ ಕಾರಣಕ್ಕೆ ಕಾರ್ಮಿಕರಿಗೆ ಅಗೆಯಲು ಸಾಧ್ಯವಾಗದ ಕಾರಣ ಜೆಸಿಬಿ ತಂದು ಅಗೆಯಲಾಗಿತ್ತು. ಆದರೆ ಈ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಈ ಕಾರ್ಯಾಚರಣೆಯನ್ನು ಇಂದೂ ಮುಂದುವರಿಸಲಾಗಿದೆ.

ಅಸ್ಥಿಪಂಜರಗಳ ಹುಡುಕಾಟಕ್ಕಾಗಿ ಇಂದು 11 ಗ‌ಂಟೆಯ ಸುಮಾರಿಗೆ ಸಾಕ್ಷಿ ದೂರುದಾರನೊಂದಿಗೆ ಎಸ್‌​ಐಟಿ ತಂಡ ನೇತ್ರಾವತಿ ಸ್ನಾನಘಟ್ಟಕ್ಕೆ ಆಗಮಿಸಿತು. 10 ಗಂಟೆಗೆ ಬೆಳ್ತಂಗಡಿ ಎಸ್​ಐಟಿ ಕಚೇರಿಗೆ ತನ್ನ ವಕೀಲರ ಜೊತೆ ಆಗಮಿಸಿದ್ದು, ಕಚೇರಿಯ ಪ್ರಕ್ರಿಯೆಗಳನ್ನು ಮುಗಿಸಿ ತಂಡ ಸ್ನಾನಘಟ್ಟ ತಲುಪಿದೆ.

ಎಸ್​​ಐಟಿ ತಂಡದ ಅಧಿಕಾರಿಗಳಾದ ಐಪಿಎಸ್ ಅನುಚೇತ್, ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್​ಪಿ ಸೈಮನ್, ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರು ಕೆ.ಎಮ್.ಸಿ ವೈದ್ಯರ ತಂಡ, ಎಫ್ಎಸ್ಎಲ್ ತಂಡ, ಐಎಸ್​ಡಿ ಹಾಗೂ ಇತರ ಅಧಿಕಾರಿಗಳ ತಂಡ ಆಗಮಿಸಿದೆ. ಇಂದು ಆತ ಗುರುತಿಸಿದ ಎರಡನೇ ಸ್ಥಳದಲ್ಲಿ ಅಗೆಯಲಾಗುತ್ತಿದೆ.

ದೂರುದಾರ ನೀಡಿದ ಮಾಹಿತಿಯಂತೆ ನೇತ್ರಾವತಿ ಸ್ನಾನಘಟ್ಟದ ಬಳಿ ಕಾರ್ಯಾಚರಣೆ ನಡೆಯುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳಕ್ಕೆ ಬಂದು ಕಾರ್ಯಾಚರಣೆ ವೀಕ್ಷಿಸುತ್ತಿದ್ದಾರೆ. ಮುಂಜಾನೆಯಿಂದ ಕಾರ್ಯಾಚರಣೆ ಮುಗಿಯುವವರೆಗೆ ಹಲವರು ಬಂದು ಈ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ