ನಿಪ್ಪಾಣಿ ನಗರದ ಶ್ರೀ ದುರ್ಗಾಮಾತಾ ಮಂದಿರದ ಹತ್ತಿರ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಮೊತ್ತದಲ್ಲಿ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಲಾಯಿತು.
ಇದಕ್ಕೂ ಮೊದಲು ದೇವಿಯ ದರ್ಶನ ಪಡೆದು,ಆರತಿ ಬೆಳಗಿ,ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
ಈಗಾಗಲೇ 11 ಲಕ್ಷ ರೂ ಮೊತ್ತದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದ್ದು
,ಹಂತ ಹಂತವಾಗಿ ಅನುದಾನ ನೀಡಿ,ಸಮುದಾಯ ಭವನ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು,ದೇವಸ್ಥಾನ ಕಮೀಟಿ ಅಧ್ಯಕ್ಷರು,ಸದಸ್ಯರು,ಸ್ಥಳೀಯ ಮುಖಂಡರು,ಮಹಿಳಾ ಮೋರ್ಚಾ ಹಾಗೂ ಯುವ ಮೋರ್ಚಾ ಸದಸ್ಯರು ಉಪಸ್ಥಿತರಿದ್ದರು.
Laxmi News 24×7