ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಆಘಾತಗೊಂಡ ತಂದೆ ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೆಹಬೂಬ್ ಆತ್ಮಹತ್ಯೆಗೆ ಶರಣಾದ ೨೨ ವರ್ಷದ ಮಗ. ಜಮೀನಿನ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಹಿರಿಯರು ನ್ಯಾಯಪಂಚಾಯಿತಿ ಮಾಡಿ ಬಗೆಹರಿಸಿದ್ದರು. ಆದರೆ ಕೆಲವರು ಯುವಕನ ವಿರುದ್ಧ ಜಾತಿ ನಿಂದನೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾರೆ.
ಇದರಿಂದ ಹೆದರಿದ ಯುವಕ ಜೈಲಿಗೆ ಹೋದರೆ ಮರ್ಯಾದೆ ಪ್ರಶ್ನೆ ಎಂದು ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ ಆಘಾತಕ್ಕೊಳಗಾದ ಮೆಹಬೂಬ್ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
Laxmi News 24×7