Breaking News

ರೇಣುಕಾಸ್ವಾಮಿ ರೀತಿ ಕಲಬುರಗಿಯಲ್ಲಯೂ ಕಿಡ್ನಾಪ್ ಮಾಡಿ ಹತ್ಯೆ: ವ್ಯಕ್ತಿ ಕೊಲೆ ಹಿಂದೆ ಹಳೇ ಲವರ್ ಗ್ಯಾಂಗ್

Spread the love

ಕಲಬುರಗಿ, (ಜುಲೈ 07): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆ (Renukaswamy Murder Case)  ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದ್ದು,

ಇದೀಗ ಕಲಬುರಗಿಯಲ್ಲೂ (Kalaburagi) ಸಹ ನಡೆದಿರುವುದು ಬೆಳಕಿಗೆ ಬಂದಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬಳಿಕ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಕೊಲೆ ಮಾಡಿತ್ತು.

ಅದೇ ಮಾದರಿಯಲ್ಲಿ ಕಲಬುರಗಿಯಲ್ಲಿ ಕಿರುಕುಳ ನೀಡುತ್ತಿದ್ದಾನೆಂದು ರಾಘವೇಂದ್ರ ನಾಯಕ್ (39) ಎನ್ನುವಾತನನ್ನು  ಹಳೇ ಲವರ್ ಅಶ್ವಿನಿ ಆ್ಯಂಡ್ ಗ್ಯಾಂಗ್ ಮಾರ್ಚ್ 12ರಂದು ಕಿಡ್ನಾಪ್ ಮಾಡಿ ಬಳಿಕ ಹತ್ಯೆ ಮಾಡಿರುವ ಆಘಾತಕಾರಿ ಕೃತ್ಯವೊಂದು ಆ ಪ್ರಕರಣವನ್ನು ಮತ್ತೆ ನೆನಪಿಸಿದೆ.

ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆ್ಯಂಡ್ ಗ್ಯಾಂಗ್​ ಕಲಬುರಗಿ ನಗರದ ರಾಘವೇಂದ್ರ ನಾಯಕ್ (39) ಎನ್ನುವಾತನ್ನು ಅಪಹರಿಸಿ ಕೀರ್ತಿ ನಗರದಲ್ಲಿರುವ ಸ್ಮಶನಕ್ಕೆ ಕರೆದೊಯ್ದಿದ್ದು, ಬಳಿಕ ರಾಘವೇಂದ್ರನ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ ಬಳಿಕ ಬರ್ಬರವಾಗಿ ಕೊಲೆ ಮಾಡಿದೆ. ಈ ಸಂಬಂಧ ಕಿಡ್ನ್ಯಾಪ್ ತನೀಖೆ ಮಾಡುತ್ತಿದ್ದ ಪೊಲೀಸರಿಗೆ ಬೆಚ್ಚಿ ಬಿಳಿಸೋ ಈ ಅಂಶ ಬಯಲಿಗೆ ಬಂದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ