Breaking News

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಸಚಿವ ಸತೀಶ್ ಜಾರಕಿಹೊಳಿ

Spread the love

ಚಿಕ್ಕೋಡಿ (ಬೆಳಗಾವಿ) : ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ, ಹೈಕಮಾಂಡ್ ನಿರ್ಧಾರ ಮಾಡಬೇಕು ಅಲ್ಲವೇ? ಯಾವಾಗ ಬದಲಾವಣೆ ಆಗುತ್ತದೆ, ಯಾವಾಗ ಮಾಡುತ್ತಾರೆ ಅನ್ನೋದು ಹೈಕಮಾಂಡ್​​ಗೆ ಬಿಟ್ಟಿರುವ ವಿಚಾರ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನಂತೂ ಆಕಾಂಕ್ಷಿ ಇದ್ದೇನೆ. ಹೈಕಮಾಂಡ್ ಯಾವಾಗ ಮಾಡುತ್ತಾರೆ ಕಾದು ನೋಡಬೇಕು. ನಾನು ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜೀವ್ ಗಾಂಧಿ ವಸತಿ ಯೋಜನೆಯ ಹಗರಣದ ಕುರಿತು ಶಾಸಕ ಬಿ. ಆರ್. ಪಾಟೀಲ್ ಆಡಿಯೋ ವೈರಲ್ ವಿಚಾರ ಮಾತನಾಡಿ, ಶಾಸಕರ ಹೇಳಿಕೆಯನ್ನು ತನಿಖೆ ಮಾಡಿಸಬೇಕು, ಮೊದಲು ತನಿಖೆ ಆಗಬೇಕು, ಆಮೇಲೆ ವಿಚಾರ ಮಾಡೋಣ. ತನಿಖೆಯಿಂದ ಸತ್ಯಾಂಶ ಹೊರ ಬರುತ್ತೆ. ನಾನಾಗಿ ಯಾವುದೇ ತನಿಖೆಗೆ ಒತ್ತಾಯ ಮಾಡಲ್ಲ. ಇಲಾಖೆ ತಾನಾಗಿಯೇ ತನಿಖೆ ನಡೆಸಲಿ. ಅದು ಅವರ ಕರ್ತವ್ಯ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ವಿಭಜನೆ ವಿಚಾರದ ಕುರಿತು ಮಾತನಾಡಿದ ಅವರು, ತಕ್ಷಣ ಆಗುತ್ತೆ ಅಂತಾ ಇಲ್ಲ. ಇದೇ ಸರ್ಕಾರದಲ್ಲಿ ಜಿಲ್ಲೆ ವಿಭಜನೆ ಆಗಬೇಕು ಅನ್ನೋದು ನನ್ನ ಆಸೆಯಿದೆ, ಸ್ವಲ್ಪ ವಿಳಂಬ ಆಗುತ್ತಿದೆ. ನಾನಾ ಕಾರಣಗಳಿವೆ. ಇದೆ ಸರ್ಕಾರದಲ್ಲಿ ಮಾಡಬೇಕು ಎಂದು ನಮ್ಮದು ಪ್ರಯತ್ನವಿದೆ ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ