Breaking News

ಶಿವರಾಜ ತಂಗಡಗಿ ಬೆಂಗಾವಲು ವಾಹನ ಅಪಘಾತ

Spread the love

ಗಂಗಾವತಿ (ಕೊಪ್ಪಳ): ಸಚಿವ ಶಿವರಾಜ ತಂಗಡಗಿ ಪ್ರಯಾಣಿಸುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ನಿಗಮದ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಅದೃಷ್ಟವಶಾತ್​ ಘಟನೆಯಲ್ಲಿ ಚಾಲಕ ಅಮರೇಶ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಚಿತ್ರದುರ್ಗ-ಹಿರಿಯೂರು ಮಧ್ಯೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಕಾನಹೊಸಳ್ಳಿ ಬಳಿ ಘಟನೆ ನಡೆದಿದೆ. ಗಂಗಾವತಿಯಲ್ಲಿ ಸಂಜೆವರೆಗೂ ಕೆಡಿಪಿ ಸಭೆ ನಡೆಸಿದ ಸಚಿವ ಶಿವರಾಜ ತಂಡಗಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಶಿವರಾಜ ತಂಗಡಗಿ ಪ್ರಯಾಣಿಸುತ್ತಿದ್ದ ಹಿಂದಿದ್ದ ಈ ಗಸ್ತು ವಾಹನದ ಚಾಲಕ, ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ಇಲಾಖೆಯ ಗಸ್ತು ವಾಹನದ ಹಿಂದೆ ಸಚಿವ ತಂಗಡಗಿ ಪ್ರಯಾಣಿಸುತ್ತಿದ್ದರು. ಸಚಿವರ ವಾಹನದ ಹಿಂದೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ನಿಗಮದ ವಾಹ‌ನ ಬೆಂಗಾವಲಾಗಿತ್ತು. ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ