Breaking News

ಅಂಕೋಲಾದಲ್ಲಿ ಮನೆವರೆಗೂ ಬಂದು ಚಿರತೆ ದಾಳಿ

Spread the love

ಕಾರವಾರ: ನಿರ್ಮಾಣ ಹಂತದ ಹೊಸ ಮನೆ ಸೇರಿಕೊಂಡಿದ್ದ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾ.ಪಂ.ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ನಡೆದಿದೆ. ಸಂತೋಷ್​ ಹೂವಣ್ಣ ಗೌಡ (24) ಎಂಬವರು ಗಾಯಗೊಂಡಿದ್ದಾರೆ.

ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿತ್ತು. ಅಲ್ಲಿ ಒಣ ಹಾಕಿದ್ದ ಬಟ್ಟೆ ತರಲು ಹೋದ ಯುವತಿ ಚಿರತೆಯನ್ನು ಕಂಡು ಕಿರುಚುತ್ತಾ ಓಡಿ ಹೊರಬಂದಿದ್ದು, ಚಿರತೆಯೂ ಹೊರಗೆ ಬಂದಿದೆ. ಅದೇ ಕ್ಷಣದಲ್ಲಿ ಸಂತೋಷ್​ ಗೌಡ ಕೂಡ ಮನೆಯಿಂದ ಹೊರಬಂದಿದ್ದು, ಚಿರತೆ ದಾಳಿ ಮಾಡಿ ಓಡಿ ಹೆದರಿ ಓಡಿ ಹೋಗಿದೆ. ಸಂತೋಷ್ ಅವರ ಎರಡೂ ಕೈಗಳಿಗೆ ಪರಚಿದ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಕೋಲಾ ಪಿಐ ಚಂದ್ರಶೇಖರ್​ ಮಠಪತಿ ಮತ್ತು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿ ಮನುಷ್ಯರ ಮೇಲೆ ದಾಳಿ ಮಾಡಿರುವುದರಿಂದ ನಮ್ಮೆಲ್ಲರಲ್ಲೂ ಆತಂಕ ಹೆಚ್ಚಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಮತ್ತೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನ, ಜಾನುವಾರಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಅಗಸೂರು ಗ್ರಾ.ಪಂ.ಸದಸ್ಯ ಆನಂದು ಗೌಡ ಆಗ್ರಹಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ