ಹಾವೇರಿ: ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೃತರನ್ನು ದಾವಣಗೆರೆ ಮೂಲದ ಪ್ರವೀಣ (36) ಮತ್ತು ವಿಜಯ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ, ಕೊಟ್ರೇಶ ಅಬಲೂರ ಎಂಬವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಸಾರಿಗೆ ಬಸ್ ಅಥಣಿಯಿಂದ ದಾವಣಗೆರೆಗೆ ಹೊರಟಿತ್ತು. ಈ ವೇಳೆ, ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ಬಸ್ಗೆ ಕಾರು ಡಿಕ್ಕಿಯಾಗಿ ದುರ್ಘಟನೆ ನಡೆದಿದೆ.ಮಾಹಿತಿ ತಿಳಿದ ತಕ್ಷಣ ಕುಮಾರಪಟ್ಟಣಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಮಾರಪಟ್ಟಣಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7