Breaking News

ಅರವಳಿಕೆ ಶಾಸ್ತ್ರದ ಸ್ನಾತಕೋತ್ತರ ಅಧ್ಯಯನಕ್ಕೆ ಆಯ್ಕೆ ಹಲಸಿ ವೈದ್ಯ ಡಾ ಮಂಜುನಾಥ ದಳವಾಯಿ ಬೀಳ್ಕೊಡುಗೆ

Spread the love

ಅರವಳಿಕೆ ಶಾಸ್ತ್ರದ ಸ್ನಾತಕೋತ್ತರ ಅಧ್ಯಯನಕ್ಕೆ ಆಯ್ಕೆ ಹಲಸಿ ವೈದ್ಯ ಡಾ ಮಂಜುನಾಥ ದಳವಾಯಿ ಬೀಳ್ಕೊಡುಗೆ
ಖಾನಾಪೂರ ತಾಲೂಕಿನ ಐತಿಹಾಸಿಕ ಕಂದಬರ ಉಪರಾಜ್ಯಧಾನಿ ಹಲಸಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಡಾಕ್ಟರ್ ಮಂಜುನಾಥ ದಳವಾಯಿ ಅವರು ಸೇವಾ ನಿರತ ಸರ್ಕಾರಿ ಕೋಟಾದಡಿ ಅರವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ತಾಲೂಕಾ ಆರೋಗ್ಯ ಇಲಾಖೆ ಖಾನಾಪೂರ ಮತ್ತು ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದವತಿಯಿಂದ ಅದ್ದೂರಿಯಾಗಿ ಬೇಳ್ಕೂಟರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಆರೋಗ್ಯಾಧಿಕಾರಿ ಡಾಕ್ಟರ್ ಮಹೇಶ್ ಕಿವಡಸನ್ನವರ ಅವರು ಸುಮಾರು ಹತ್ತು ವರ್ಷಗಳ ಕಾಲ ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಡಾ ಮಂಜುನಾಥ ಅವರು ಸರ್ಕಾರಿ ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಸ್ಪಂದಿಸಿ ಒಳ್ಳೆಯ ಚಿಕಿತ್ಸೆ ನೀಡಿ ಅವರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುವ ಸ್ವಭಾವವನ್ನು ಹೊಂದಿರುವ ವೈದ್ಯರು ಇವರು ಒಳ್ಳೆಯ ವೈದ್ಯರೆಂದು ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವಕ್ಕೆ ಇವರ ಹತ್ತು ವರ್ಷಗಳ ಸೇವೆಯೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಅವರ ಮುಂದಿನ ಅಧ್ಯಯನಕ್ಕೆ ಶುಭಹಾರೈಸಿ ಇವರನ್ನು ಆತ್ಮೀಯವಾಗಿ ಮಾಲಾರ್ಪಣೆ ಮಾಡಿ ಗೌರವ ಪೂರ್ವಕವಾಗಿ ಬೇಳ್ಕೋಟರು.
ಈ ಸಂದರ್ಭದಲ್ಲಿ ಡಾಕ್ಟರ್ ಮಹೇಶ್ ಕಿವಡಸನ್ನವರ, ಡಾಕ್ಟರ್ ಪ್ರದೀಪ್ ಸೋಮನ್ನವರ,ಡಾಕ್ಟರ್ ಬಾವಚ್ಚಿ, ಡಾಕ್ಟರ್ ಮೃನಾನಳ್ಳಿನಿ, ಡಾಕ್ಟರ್.ಕಿನ್ನಗಿ, ನಂದಗಡದ ಉಪ ಅರಣ್ಯಾಧಿಕಾರಿ ಮಾಧುರಿ ದಳವಾಯಿ, ಶಿವಾನಂದ ಬುಡರಕಟ್ಟಿ,ಎನ್ ಆರ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕಲ್ಯಾಣಿ, ನಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ