Breaking News

ಚನ್ನಮ್ಮ ವೃತ್ತದ ಬಳಿ ಮಂಗಳವಾರ ಮಧ್ಯ ರಾತ್ರಿಯ ನಂತರ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್

Spread the love

ಬೆಳಗಾವಿ: ಇಲ್ಲಿಯ ಚನ್ನಮ್ಮ ವೃತ್ತದ ಬಳಿ ಮಂಗಳವಾರ ಮಧ್ಯ ರಾತ್ರಿಯ ನಂತರ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಆರ್ ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆಗೆ ಸೇರಿದ್ದ ಸಹಸ್ರಾರು ಜನರು ಒಂದು ಗಂಟೆಯಾದರೂ ಸ್ಥಳದಿಂದ ಕದಲದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಎದುರಿಸಬೇಕಾಯಿತು.

ಈ ವೇಳೆ ಹಲವರು ಕೆಳಕ್ಕೆ ಬಿದ್ದಿದ್ದು, ಕೆಲವರು ಓಡಿ ಲಾಠಿ ಏಟು ತಪ್ಪಿಸಿಕೊಂಡಿದ್ದಾರೆ.

ಚನ್ನಮ್ಮ ವೃತ್ತದ ಬಳಿ ಹಾಕಲಾಗಿದ್ದ ಬಿಗ್ ಸ್ಕ್ರೀನ್ ನಲ್ಲಿ ಪಂದ್ಯ ನೋಡಲು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಆರ್ ಸಿಬಿ ಗೆಲ್ಲುತ್ತಿದ್ದಂತೆ ಜನರ ಹರ್ಷೋದ್ಗಾರ, ಕುಣಿತ ಮೇರೆ ಮೀರಿತು. ಬಹಳ ಹೊತ್ತಿನವರೆಗೂ ಇದು ಮುಂದುವರಿದಾಗ ಪೊಲೀಸರು ಲಾಠಿ ಕೈಗೆತ್ತಿಕೊಳ್ಳಬೇಕಾಯಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ