ಕಲಬುರಗಿ, ಮೇ 28: ಕಲಬುರಗಿಯ (Kalaburagi) ನಂದೂರು ಇಂಡಸ್ಟ್ರಿಯಲ್ ಏರಿಯಾದಲ್ಲಿನ ದಿನೇಶ್ ದಾಲ್ ಇಂಡಸ್ಟ್ರೀಸ್ ಮಾಲೀಕ ಗೋವಿಂದ ವಾಗ್ಮೋರೆ ಎಂಬುವರು ಎಪಿಎಂಸಿಯ (APMC) ಸುಮಾರು 40ಕ್ಕೂ ಹೆಚ್ಚು ವರ್ತಕರಿಗೆ 15 ಕೋಟಿ ರೂಪಾಯಿ ವಂಚಿಸಿದ್ದಾನೆ.
ಕಳೆದ ಹಲವಾರು ದಿನಗಳಿಂದ ಪೋನ್ ಮಾಡಿದರೂ ಸ್ವಿಚ್ಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ. ಸೋಮವಾರ (ಮೇ.26) ರಾತ್ರಿ ಏಕಾಏಕಿ ದಾಲ್ ಮಿಲ್ನಲ್ಲಿದ್ದ ನೂರಾರು ಮೂಟೆ ತೊಗರಿ ಬೇಳೆಯನ್ನು ಯಾರಿಗೂ ಗೊತ್ತಾಗದಂತೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು.
ಈ ವಿಚಾರ ತಿಳಿದ ಎಪಿಎಂಸಿ ವರ್ತಕರು ಮೀಲ್ಗೆ ತೆರಳಿ ಲಾರಿಗಳನ್ನು ತಡೆದಿದ್ದಾರೆ. ನಮ್ಮ ಹಣ ವಾಪಸ್ ಕೊಡುವವರೆಗೂ ಕೋಟ್ಯಂತರ ರೂಪಾಯಿ ಮೌಲ್ಯದ ತೊಗರಿ ಬೆಳೆಯನ್ನು ಸಾಗಿಸಲು ಬಿಡಲ್ಲ ಎಂದು ಪಟ್ಟು ಹಿಡಿದರು.ಆದರೆ, ತೊಗರಿ ಬೇಳೆ ತೆಗೆದುಕೊಂಡು ಹೋಗಲು ಬಂದವರು, ನಾವು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ದಾಲ್ ಮಿಲ್ನವರು ಎಂದಿದ್ದಾರೆ.
ಗೋವಿಂದ ವಾಗ್ಮೋರೆ ತಮಗೂ ಕೂಡ ಮೋಸ ಮಾಡಿದ್ದಾನೆ. ಹೀಗಾಗಿ, ಆತನ ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವೆ. ನನ್ನ ದಾಲ್ ಮಿಲ್ನಲ್ಲಿ ನೂರಾರು ಕ್ವಿಂಟಲ್ ತೊಗರಿ ಬೇಳೆಯಿದೆ ಎಂದು ಗೋವಿಂದ ಹೇಳಿದ್ದನು. ಹೀಗಾಗಿ, ತೆಗೆದುಕೊಂಡು ಹೋಗಲು ಬಂದಿದ್ದೆವೆ ಎಂದು ಹೇಳಿದ್ದಾರೆ.
Laxmi News 24×7