ಹೋದಿಗೆರೆಯಲ್ಲಿರುವ ಛತ್ರಪತಿ ಶಹಾಜೀ ಮಹಾರಾಜರ ಸಮಾಧಿಯನ್ನು ಅಭಿವೃದ್ಧಿಪಡಿಸಿ…
ಕರ್ನಾಟಕ ಮರಾಠಾ ಸಮಾಜದಿಂದ ಎಂ.ಎಲ್.ಸಿ ಎಂ.ಜಿ. ಮುಳೆ ಅವರಿಗೆ ಮನವಿ
ಕರ್ನಾಟಕ ಮರಾಠಾ ಸಮಾಜದ ಪ್ರಮುಖ ನಾಯಕರು ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ ಅವರು ಭೇಟಿಯಾಗಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜರ ತಂದೆಯವರಾದ ಶಹಾಜೀ ಮಹಾರಾಜರ ಸಮಾಧಿ ಅಭಿವೃದ್ಧಿಯ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿಯ ಸಾಹಿತಿಗಳು ಮತ್ತು ಇತಿಹಾಸ ಸಂಶೋಧಕರಾದ ಡಾ. ಸರ್ಜೂ ಕಾಟ್ಕರ್ ಉಪಸ್ಥಿತರಿದ್ಧರು. ಅವರು ಬರೆದ ದಿ ಗ್ರೇಟ್ ಮರಾಠಾ ಶಿವಾಜೀ ಪುಸ್ತಕವನ್ನು ಎಂ.ಎಲ್.ಸಿ. ಎಂ.ಜಿ. ಮುಳೆ ಅವರಿಗೆ ಉಡುಗೊರೆಯಾಗಿ ಮಾಜಿ ಮಹಾಪೌರ ಮಾಲೋಜಿರಾವ್ ಅಷ್ಟೇಕರ ಅವರು ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಆನಂದ ಆಪಟೇಕರ, ಜನಸಂಪರ್ಕ ವಿಕಾಸ್ ಕಲಘಟಗಿ, ಸಕಲ ಮರಾಠಾ ಪದಾಧಿಕಾರಿಗಳಾದ ವಿಜಯ ಕದಮ್, ಲಕ್ಷ್ಮಣ ಕಿಲ್ಲೇಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು
Laxmi News 24×7