Breaking News

ಅರಿಹಂತ ಆಸ್ಪತ್ರೆಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಮಕ್ಕಳಿಗೆ ಚಿಕಿತ್ಸೆ:

Spread the love

ಚಿಕ್ಕಮಕ್ಕಳ ಹೃದ್ರೋಗ ತಜ್ಞವೈದ್ಯ ಡಾ. ಗೋವಿಂದ ಔರಾದ್ಕರ್ ಅವರು ಅರಿಹಂತ್ ಆಸ್ಪತ್ರೆಯಲ್ಲಿ ಲಭ್ಯ
ಚಿಕ್ಕಮಕ್ಕಳ ಹೃದ್ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಪರಿಣಿತಿ ಹೊಂದಿರುವ ಡಾ. ಗೋವಿಂದ ಔರಾದಕರ ಅವರು ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ ಲಭ್ಯವಿರುವದರಿಂದ ಈ ಭಾಗದ ಚಿಕ್ಕಮಕ್ಕಳ ಹೃದ್ರೋಗ ಕ್ಕೆ ಒಳ್ಳೆಯ ಚಿಕಿತ್ಸೆ ಲಭಿಸಲಿದೆ.
ಅತ್ಯಂತ ಕೌಶಲ್ಯಯುತ ಸಮಾರ್ಪಣಾ ಭಾವದೊಂದಿಗೆ ಸೇವೆ ಸಲ್ಲಿಸುವ ಡಾ. ಗೋವಿಂದ ಔರಾದ್ಕರ ಅವರು ತಮ್ಮ ಅಲ್ಪ ವೈದ್ಯಕೀಯ ಸೇವಾಜೀವನದಲ್ಲೇ ಮಕ್ಕಳ ಹೃದಯ ರೋಗ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದು, ಈಗಾಗಲೇ ಹಲವಾರು ಮಕ್ಕಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಕರ್ನಾಟಕದ ಗಡಿಭಾಗದ ಬೀದರ್‌ನಲ್ಲಿ ಜನಿಸಿದ ಡಾ. ಔರಾದ್ಕರ್ ಅವರು ತಮ್ಮ ವೈದ್ಯಕೀಯ ಶಿಕ್ಷಣವನ್ನು ಬಾಗಲಕೋಟೆಯ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ, ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕ್ಕಮಕ್ಕಳ ಆರೋಗ್ಯದಲ್ಲಿ ಸ್ನಾತಕೋತ್ತರ ಹಾಗೂ ಬೆಂಗಳೂರಿನ ಶ್ರೀ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ಚಿಕ್ಕಮಕ್ಕಳ ಹೃದ್ರೋಗದಲ್ಲಿ ಡಿಎಂ ಪದವಿ ಪಡೆದಿದ್ದಾರೆ.
ಫಿಟಲ್ ಕಾರ್ಡಿಯಾಲಜಿ ಮತ್ತು ಫಿಟಲ್ ಇಕೊಕಾರ್ಡಿಯೋಗ್ರಫಿಯಲ್ಲಿ ತರಬೇತಿ ಪಡೆದ ಡಾ. ಔರದ್ಕರ್ ಅವರು, ಗರ್ಭಾವಸ್ಥೆಯಲ್ಲಿಯೇ ಹೃದಯದ ತೊಂದರೆಗಳನ್ನು ಗುರುತಿಸಿ ಮತ್ತು ನಿರ್ವಹಿಸಲು ಹೆರಿಗೆ ತಜ್ಞರೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದ್ದಾರೆ, ಇದರಿಂದ ಮಗುವಿಗೆ ಹುಟ್ಟುವ ಮೊದಲು ಸಮಗ್ರ ಹೃದಯ ಆರೈಕೆ ಒದಗಿಸಲಾಗುತ್ತದೆ.
ವಿವಿಧ ಯೋಜನೆಗಳಡಿಯಲ್ಲಿ ಮಕ್ಕಳಿಗೆ ಚಿಕಿತ್ಸೆ:
ಅರಿಹಂತ್ ಆಸ್ಪತ್ರೆಯು ಯಾವಾಗಲೂ ಅಬಾಲವೃದ್ದರವರೆಗೂ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದೆ. ಡಾ. ಔರಾದ್ಕರ್ ಅವರ ಸೇರ್ಪಡೆಯಿಂದ, ಹೃದಯ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಭಾಗದ ಮಕ್ಕಳಿಗೆ ವಿವಿಧ ಆರೋಗ್ಯ ಯೋಜನೆಗಳಡಿಯಲ್ಲಿ ಎಲ್ಲ ರೀತಿಯ ಹೃದ್ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಅರಿಹಂತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ಡಿ. ದೀಕ್ಷಿತ್ ಅವರು, “ಡಾ. ಔರಾದ್ಕರ್ ಅವರಾಗಮನದಿಂದ ಮಕ್ಕಳು ಮತ್ತು ಅವರ ಪೋಷಕರಿಗೆ ಶ್ರೇಷ್ಠ ಗುಣಮಟ್ಟದ ಸೇವೆ ಲಭ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ