Breaking News

ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ‘ಗೃಹಲಕ್ಷ್ಮೀ’ ತಿರಸ್ಕಾರ

Spread the love

ಕಾರವಾರ (ಉತ್ತರ ಕನ್ನಡ): ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಪ್ರಸ್ತುತ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಮನೆಯೊಡತಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಈವರೆಗೆ 1,095.03 ಕೋಟಿ ರೂ. ನೀಡಿದ್ದು, ಶೇ.99.91ರಷ್ಟು ಸಾಧನೆ ಮಾಡಿದೆ. ಆದರೆ, ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯು ತಮಗೆ ಬೇಡ ಎಂದು ತಿರಸ್ಕರಿಸಿದ್ದಾರೆ.

ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 3,61,481 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವ ಕಾರಣದಿಂದ 25,676 ಮಂದಿ ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿದ್ದಾರೆ. ಉಳಿದಂತೆ, ಅರ್ಹ 3,35,805 ಪಡಿತರ ಚೀಟಿಗಳಲ್ಲಿ 3,35,498 ಮಂದಿಯನ್ನು ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿ ಶೇ.99.91 ಸಾಧನೆ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿರುವವರಲ್ಲಿ 10,377 ಮಂದಿ ಆದಾಯ ತೆರಿಗೆ ಮತ್ತು ಜಿಎಸ್​​ಟಿ ಪಾವತಿದಾರರು, 4,875 ಮಂದಿ ಮರಣ ಹೊಂದಿರುವವರು, 7,503 ಮಂದಿ ವಲಸೆ ಹೋಗಿರುವವರು, 1,779 ನಿಷ್ಕ್ರಿಯಗೊಂಡ ಪಡಿತರ ಚೀಟಿಗಳು ಮತ್ತು ಯೋಜನೆಯನ್ನು ನಿರಾಕರಿಸಿರುವ 1,140 ಮಂದಿ ಇದ್ದಾರೆ.

ಯೋಜನೆಯಡಿ ಅಂಕೋಲಾ ತಾಲೂಕಿನಲ್ಲಿ 26,973 ಫಲಾನುಭವಿಗಳನ್ನು ನೋಂದಾಯಿಸಿದ್ದು, ಭಟ್ಕಳದಲ್ಲಿ 33,858, ದಾಂಡೇಲಿಯಲ್ಲಿ 13,931, ಹಳಿಯಾಳದಲ್ಲಿ 29,739, ಹೊನ್ನಾವರದಲ್ಲಿ 39,853, ಕಾರವಾರದಲ್ಲಿ 32,728, ಕುಮಟಾದಲ್ಲಿ 37,299, ಮುಂಡಗೋಡದಲ್ಲಿ 24,450, ಸಿದ್ದಾಪುರದಲ್ಲಿ 23,720, ಶಿರಸಿಯಲ್ಲಿ 41,326, ಸೂಪಾದಲ್ಲಿ 12,886, ಯಲ್ಲಾಪುರದಲ್ಲಿ 18,735 ಮಂದಿ ಮಹಿಳೆಯರನ್ನು ನೋಂದಾಯಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ