Breaking News

ಖಾನಾಪೂರ ತಾಲೂಕಿನ ಕಸಬಾ ನಂದಗಡದ ಸುಪ್ರಸಿದ್ಧ ಹೋನಮ್ಮ ದೇವಿ ಕರೆ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೋಳ್ಳಿ ಅವರು ಒಂದು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದು ಈ ಕೆರೆ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

Spread the love

ಖಾನಾಪೂರ ತಾಲೂಕಿನ ಕಸಬಾ ನಂದಗಡದ ಸುಪ್ರಸಿದ್ಧ ಹೋನಮ್ಮ ದೇವಿ ಕರೆ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೋಳ್ಳಿ ಅವರು ಒಂದು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದು ಈ ಕೆರೆ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಒಂದು ಕೋಟಿ ರೂಪಾಯಿ ಅನುದಾನ ಸಧ್ಯಕ್ಕೆ ಮಂಜೂರಾತಿ ಮೊದಲನೇ ಹಂತದಲ್ಲಿ ಆಗಿದ್ದು ಈ ಅಭಿವೃದ್ಧಿ ಕೆಲಸಕ್ಕೆ ಅವರ ಅನುಪಸ್ಥಿತಿಯಲ್ಲಿ ಅವರ ಆದೇಶದ ಮೇರೆಗೆ ಕಾಂಗ್ರೆಸ್ ಯುವ ಮುಖಂಡ ಎನ್ ಆರ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕಲ್ಯಾಣಿ ಅವರು ಹೊನ್ನಮ್ಮ ದೇವಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಗುದ್ದಲಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾತ್ಮ ಗಾಂಧಿ ಪಿಯು ಕಾಲೇಜಿನ ಪ್ರಾಂಶುಪಾಲ ಎಮ್.ಕೆ.ಭಜಂತ್ರಿ ಅವರು ಮಾತನಾಡಿ ಹಳ್ಳಿಗಳ ಉದ್ದಾರವೇ ದೇಶದ ಉದ್ಧಾರ, ಇಂತಹಾ ಒಂದು ಮೊಲ ಮಂತ್ರವನ್ನು ಇಟ್ಟುಕೊಂಡು ನಮ್ಮ ಕರ್ನಾಟಕ ಸರ್ಕಾರ ಹಳ್ಳಿಗಳ ಉದ್ದಾರಕ್ಕಾಗಿ ಸಹಸ್ರಾರು ಯೋಜನೆಗಳ ಅನುಷ್ಠಾನ ತದಿರುತ್ತದೆ ಇದರಲ್ಲಿ ಕೆರೆ ಅಭಿವೃದ್ಧಿ ಕೂಡಾ ಒಂದು ಕೆರೆಗಳ ಅಭಿವೃದ್ಧಿ ಮಾಡಿದರೆ ಅಂತರ ಜಲಮಟ ಬೆಳೆದು ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ
ಅದೇ ರೀತಿ ಸಹ್ಯಾದ್ರಿ ಬೆಟ್ಟಗಳ ನಡುವೆ ಇರುವ ರಮಣೀಯ ನಿಸರ್ಗದ ಮಡಿಲಲ್ಲಿ ಇರುವ ನಂದಗಡ -ಕಸಬಾ ನಂದಗಡದ ಮಧ್ಯದಲ್ಲಿ ಇರುವ ಈ ಒಂದು ಕೆರೆ ಪ್ರವಾಸಿ ತಾಣವಾಗಿರ ಬೇಕೆಂದು ಧಿಮಂತ ನಾಯಕ ಅಭಿವೃದ್ಧಿಯ ಹರಿಕಾರರು ಆದ ಶ್ರೀ ಯುತ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೋಳ್ಳಿ ಅವರು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ ಹೀಗೆಯೇ ಇನ್ನೂ ಮುಂದೆಯೂ ಇದೇರೀತಿ ಸಹಕರಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಖಾನಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹುತ್, ಯುವ ಕಾಂಗ್ರೆಸ್ ಮುಖಂಡ ಮಹಾಂತೇಶ ಕಲ್ಯಾಣಿ, ರಾಜೇಂದ್ರ ಕಬ್ಬುರ,ಪ್ರವೀಣ್ ಪಾಟೀಲ್, ಗುತ್ತಿಗೆದಾರರಾದ ಬಸನಗೌಡ ಪಾಟೀಲ್, ನೀರಾವರಿ ಇಲಾಖೆಯ ಎಇಇ ವಿಶ್ವನಾಥ್ ಹಳಿಯಾಳ,ನಂದಗಡ ಜಾತ್ರಾ ಉತ್ಸವ ಕಮಿಟಿಯ ಅಧ್ಯಕ್ಷ ಸುಭಾಷ್ ಪಾಟೀಲ್, ಸೇರಿದಂತೆ ನಂದಗಡ, ಕಸಬಾ ನಂದಗಡದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ