Breaking News

ಭಾರತ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಹಿನ್ನಲೆ ‌ಕೇಂದ್ರ ಗೃಹ ಸಚಿವಾಲಯ ಮಾಕ್ ಡ್ರಿಲ್ ಕರೆ ಬೆನ್ನಲ್ಲೇ… ಧಾರವಾಡ ಜಿಲ್ಲಾಡಳಿತ ವತಿಯಿಂದ ನಡೆಯಿತು ಮಾಕ್ ಡ್ರಿಲ್

Spread the love

ಭಾರತ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಹಿನ್ನಲೆ ‌ಕೇಂದ್ರ ಗೃಹ ಸಚಿವಾಲಯ ಮಾಕ್ ಡ್ರಿಲ್ ಕರೆ ಬೆನ್ನಲ್ಲೇ… ಧಾರವಾಡ ಜಿಲ್ಲಾಡಳಿತ ವತಿಯಿಂದ ನಡೆಯಿತು ಮಾಕ್ ಡ್ರಿಲ್
ಆ ಪ್ರದೆಶದಲ್ಲಿ ಎಲ್ಲಿ‌ ನೋಡಿದ್ರೂ ಕಾರ್ಖಾನೆಗಳು. ಅಲ್ಲಿ ಕೇವಲ‌ ಕಾರ್ಖಾನೆಗಳು ಸದ್ದು ಲಾರಿಗಳ ಸೌಂಡ ಬಿಟ್ಟರೆ ಬೇರೆ ಸದ್ದು ಕೇಳುವುದೇ ಅಪರೂಪಾ. ಅದರೆ ಇಂದು ಅಲ್ಲಿ ಯುದ್ಧದ ಸೈರಾನ್ ಸೇರಿ‌ ಅಂಬ್ಯುಲೇನ್ಸ್ ಸೌಂಡಗಳು ಜೋರಾಗಿತ್ತು. ಅಲ್ಲಿಯ ಸ್ಥಳೀಯರೆಲ್ಲರು ಇಲ್ಲೇನಾಗುತ್ತಿದೆ ಎಂಬ ಯೋಚನೆಯಲ್ಲಿದ್ರೂ. ಜತೆಗೆ ಅಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ನೋಡಿ ಹಾಗೂ ಅಲ್ಲಿಯವರಿಗೆ ಕೇಳಿ ಕೇಲವು ಪ್ರಮುಖ ವಿಷಯಗಳ ಕುರಿತು ತಿಳಿಕೊಳ್ಳುವ ಪ್ರಯತ್ನ ಸಾರ್ವಜನಿಕರು ಮಾಡಿದರು. ಅರೇ ಯುದ್ಧದ ಸೈರನ್ ಅಂಬ್ಯುಲೆನ್ಸ್ ಅಂತೀರಾ ಅಲೇನಾದ್ರೂ ಬಾಂಬ್ ಬಿದಿತ್ತಾ ಅಂತೀರಾ ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಕಂಪ್ಲೀಟ್ ವಿವರ..
May be an image of 3 people, ambulance and text
ಧಾರವಾಡ ಜಿಲ್ಲಾಡಳಿತ ವತಿಯಿಂದ ಮಾಕ್ ಡ್ರಿಲ್, ಕೈಗಾರಿಕೆ ಪ್ರದೇಶದಲ್ಲಿ ಯುದ್ಧದ ಸೈರಾನ್ ಸೌಂಡ್. ಭಾರತ ಪಾಕಿಸ್ತಾನ ನಡುವೆ ಯುದ್ಧದ ಭೀತಿಗೆ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಧಾರವಾಡ ಜಿಲ್ಲಾಡಳಿತದಿಂದ ಮಾಕ್‌ ಡ್ರಿಲ್. ಕಾರ್ಖಾನೆ ಲಾರಿಗಳ ಸದ್ದು ಇರುತ್ತಿದ್ದ ಪ್ರದೇಶದಲ್ಲಿ ಸೈನಿಕರು, ಅಗ್ನಿಶಾಮಕ, ಅಂಬ್ಯುಲೆನ್ಸ ಹಾಗೂ ಯುದ್ಧದ ಸೈರಾನ್ ಸೌಂಡ್May be an image of 9 people, slow loris, street and text that says "SAFETY RU SAF THE THE"
ಒಂದು ಕಡೆ ಯುದ್ಧದ ಸೈರಾನ್‌…. ಮತ್ತೊಂದು ಕಡೆ ಗಾಯಾಳುಗಳನ್ನು ಎತ್ಕೊಂಡು ಹೋಗುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ…ಮಗದೊಂದ ಕಡೆ ಸೈನಿಕರು ಪೊಲೀಸರು ‌ಹಾಗೂ ಅಗ್ನಿ‌ಶಾಮಕ ವಾಹನ ಓಡಾಟ್….ಎಸ್ ಈ ಎಲ್ಲ ದೃಶ್ಯಗಳು ಭಾರತ ಪಾಕ್ ಗಡಿ ಭಾಗದಲ್ಲ. ಇದು ಇಂದು ಧಾರವಾಡ ಜಿಲ್ಲಾಡಳಿತ ವತಿಯಿಂದ ಧಾರವಾಡ ಬೆಲ್ಲೂರು ಕೈಗಾರಿಕಾ ಪ್ರದೇಶದ‌ ಹೆಚ್ ಪಿ ಗ್ಯಾಸ್ ಆವರಣದಲ್ಲಿ ಕಂಡು ಬಂದ ದೃಶ್ಯಗಳು…
ಭಾರತ ಫಾಕ್ ನಡುವೆ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ‌ಸಚಿವಾಲಯ ದೇಶವ್ಯಾಪಿ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಮಾಡುವಂತೆ ಅಯಾ ರಾಜ್ಯ ಮುಖ್ಯ ಕಾರ್ಯದರ್ಶಿ ಮೂಲಕ ಜಿಲ್ಲಾಧಿಲಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನೇತೃತ್ವದಲ್ಲಿ ಬೆಲ್ಲೂರು ಕೈಗಾರಿಕಾ ಪ್ರದೇಶದಲ್ಲಿ ಮಾಕ್ ಡ್ರಿಲ್ ಮಾಡುವ‌ ಮೂಲಕ‌ ಸಾರ್ವಜನಿಕರಿಗೆ ಯುದ್ಧದ ಸಂದರ್ಭದಲ್ಲಿ ಯಾವ ರೀತಿಯಾಗಿ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು ಎಂಬವುದರ ಕುರಿತು ಯುದ್ಧ ಜಾಗೃತಿ‌ ಮಾಡಲಾಯಿತು. ಇನ್ನೂ ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್ ಸೇರಿ ಹಲವು ಅಧಿಕಾರಿ ಉಪಸ್ಥಿತರಿದ್ದರು. ‌May be an image of 8 people and text
ಇನ್ನೂ ಒಂದು ವೇಳೆ ಎದುರಾಳಿ ದೇಶಗಳು ನಮ್ಮ‌ ಸಾರ್ವಜನಿಕರ ಗುರಿಯಾಗಿಸಿ ಬಾಂಬ್‌ಗಳನ್ನು ಬಿಟ್ಟಾಗ ಅದರಿಂದಾಗುವ ಪ್ರಾಣ ಹಾನಿ, ಯುದ್ಧದ ಸೈರಾನ್ ಆದ ಕೂಡಲೇ ಯಾವ ರೀತಿ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಬಾಂಬ್ ಬಿದ್ದ ತಕ್ಷಣ ಸಾರ್ವಜನಿಕರು ಮಾಡಬೇಕಾದ ಮೊದಲ‌ ಕಾರ್ಯ ಏನೂ..?, ಹಾಗೂ ಅಗ್ನಿ ಶಾಮಕದಳ ಮತ್ತು ಪೊಲೀಸ್ ಇಲಾಖೆ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂಬವುದರ ಕುರಿತು ಅಣಕು ಪ್ರದರ್ಶನ ಮಾಡಲಾಯಿತು.
ಇನ್ನೂ ಇದರ ಜತೆಗೆ ಸಾರ್ವಜನಿಕರು ಬೆಳಕಿನ ವೇಳೆ ಬಾಂಬ್ ದಾಳಿ ನಡೆದಾಗ, ಅಂಡರ್ ಹೋಮ್ ಅಥವಾ ಸೆಫ್ಟಿ ಇರುವ ಜಾಗಗಳಿಗೆ ಶಿಫ್ಟ ಆಗಬೇಕು. ಬಾಂಬ್ ಬಿದ್ದ ಸ್ಥಳ ವಿವರ ವಿಷಯವನ್ನು ಪೊಲೀಸ್ ಇಲಾಖೆಗೆ ಮಾಹಿತಿ‌ ನೀಡಬೇಕು. ಪೊಲೀಸರು ಅಥವಾ ಅಗ್ನಿ ಶಾಮಕದಳ ಬರುವವರೆಗೆ ಬಾಂಬ್ ಬಿದ್ದ ಪ್ರದೇಶದಲ್ಲಿನ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಸಹಕಾರಿಯಾಗಬೇಕು. ಒಂದು ವೇಳೆ ರಾತ್ರಿ ವೇಳೆ ಬಾಂಬ್ ದಾಳಿಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಯುದ್ಧದ ಸೈರಾನ ಕೇಳಿದ ಕೂಡಲೇ ಮನೆ ಹಾಗೂ ಬೀದಿ ದೀಪಗಳ ಬಂದ್ ಮಾಡಿ ಜೀವ ಉಳಿಸಿಕೊಳ್ಳವ ಕುರಿತು ಯುದ್ಧ ಜಾಗೃತಿ ಕೈಗೊಳ್ಳಲಾಯಿತು. ‌
ಒಟ್ನಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿಯಾದ ಬೆನ್ನಲ್ಲೇ ಪಾಪಿ ಪಾಕಿಸ್ತಾನ ಪ್ರತೀಕಾರಕ್ಕೆ ಹಾಯ್ದೊರಿಯುತ್ತಿದ್ದು, ಒಂದು ವೇಳೆ ಪಾಕ್ ತನ್ನ ನರಿ ಬುದ್ದಿ ತೋರಿ ದಾಳಿ‌ ಮಾಡಿದ್ದಲ್ಲಿ ನಮ್ಮ‌ ಜನರ ಪ್ರಾಣ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಗೃಹ‌ ಸಚಿವಾಲಯ ಕರೆ ನೀಡಿದ ಮಾಕ್ ಡ್ರಿಲ್ ಇಂದು‌ ಧಾರವಾಡದಲ್ಲಿ ಯಶಸ್ವಿಯಾಗಿ ನಡೆಯಿತು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ