Breaking News

ಪಾಕಿಸ್ತಾನದಲ್ಲಿ ಮಿಲಿಟರಿ ಚುನಾಯಿತ ಸರ್ಕಾರದ್ದೆ ಮಾತು ಕೇಳಲ್ಲ ಎಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Spread the love

ಪಾಕಿಸ್ತಾನದಲ್ಲಿ ಮಿಲಿಟರಿ ಸರಕಾರದ ಮಾತು ಕೇಳಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ನಿನ್ನೆ ಪಾಕಿಸ್ತಾನದ ಅಲ್ಲಿನ ಡಿಎಂಜಿ ಕರೆ ಮಾಡಿ ಕದನ ವಿರಾಮ ಮಾಡಿದ್ರು. ನಂತರ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ.ಪಾಕಿಸ್ತಾನದಲ್ಲಿ ಮಿಲಿಟರಿ ಚುನಾಯಿತ ಸರ್ಕಾರದ್ದೆ ಮಾತು ಕೇಳಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು. ಪಾಕಿಸ್ತಾನ ದೇಶ ಭಯೋತ್ಪಾದನೆಯನ್ನ ಪೋಷಿಸುತ್ತಾ ಇರ್ತಾರೆ. ನಮ್ಮ ಡಿಫನ್ಸ್ ಫೋರ್ಸ್ ಹಾಗೂ ಚೀಫ್ ಗಳಿಗೆ ಮುಕ್ತ ಸ್ವಾತಂತ್ರ್ಯ ಮೊದಲ ಬಾರಿಗೆ ಕೊಟ್ಟಿದ್ದಾರೆ ಅನ್ನೋ ಅಭಿಪ್ರಾಯ ಬಂದಿದ್ವು. ಕಳೆದ 30-40 ವರ್ಷದಿಂದ ನಮ್ಮ ದೇಶದಲ್ಲಿ ಭಯೋತ್ಪಾದನೆ ನಡೆದುಕೊಂಡೆ ಬಂದಿದೆ.1980ರ ನಂತರ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ಚಟುವಟಿಕೆ ನಮ್ಮ ದೇಶದಲ್ಲಿ ನಡೆದಿವೆ. ಈ ಮೊದಲು ಪಹಲ್ಗಾಂಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸಂಭವಿಸಿವೆ. ಮೊದಲ ಬಾರಿಗೆ ದೇಶ ಒಂದಾಗಿ ಸರ್ಕಾರ ತೀರ್ಮಾನ ಕೈಗೊಂಡು ಬಲವಾಗಿ ಪ್ರತೀಕರಾ ತೆಗೆದುಕೊಂಡಿದ್ದೇವೆ ಎಂದರು.
ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ ಭಾರತಕ್ಕೆ ಮೋಸ್ಟ ವಾಂಟೆಡ್ ಟೇರರಿಸ್ಟ್ ಗಳ ಕುಟುಂಬಗಳು ಹತವಾಗಿವೆ. ಲಾಚಿಂಗ್ ಪ್ಯಾಡ್, ಅಡಗು ತಾಣ ಧ್ವಂಸಗೊಳಿಸಲು ಮಿಲಿಟರಿಗೆ ಸಾಧ್ಯವಾಗಿದೆ.
ಭಾರತ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ, ಮುಕ್ತ ಅವಕಾಶ ಕೊಟ್ಟಿತ್ತು. ಯುದ್ಧ ವಿರಾಮದ ಘೋಷಣೆಗಿಂತ ಮುಂಚೆ ಅತ್ಯಂತ ಕಠಿಣ ನಿಲುವು ತೆಗೆದುಕೊಂಡಿದೆ.
ಭಯೋತ್ಪಾದನೆಯನ್ನ ಯುದ್ಧ ಅಂತ ಪರಿಗಣಿಸುತ್ತೇವೆ ಅನ್ನೋ ನಿಲುವು ಕೈಗೊಂಡಿದೆ. ಇನ್ನು ಮುಂದೆ ಭಯೋತ್ಪಾದನೆ ಆದರೆ ಅದನ್ನ ಯುದ್ಧ ಅಂತ ಪರಿಗಣಿಸಲಾಗುತ್ತೆ. ಪಾಕಿಸ್ತಾನ ಇನ್ನು ಮುಂದಾದರೂ ಬುದ್ದಿ ಕಲಿಯಬೇಕು ನಾವು ಭಾರತೀಯರು ಶಾಂತಿ ಪ್ರೀಯರು. ಆದರೆ ನಮ್ಮ ಮೇಲೆ ಬಂದ್ರೆ ಬಿಡೋದಿಲ್ಲ ಅಂತ ಈ ಘಟನೆಯಿಂದ ಸ್ಪಷ್ಟ ಪಡಿಸಿದ್ದೇವೆ ಎಂದರು.
ಕದನ ವಿರಾಮಕ್ಕೆ ಯುಪಿಎ ನಾಯಕರ ಸಂತಸ ವಿಚಾರ
ಅವರು ಯಾಕೆ ಖುಷಿ ಪಟ್ರು, ಏನು ಟ್ವೀಟ್ ಮಾಡಿದ್ರು ಅದರ ಬಗ್ಗೆ ನಾನು ಹೇಳೋದಿಲ್ಲ. ಭಾರತಕ್ಕೆ ಅದರದ್ದೇಯಾದ ಶಕ್ತಿ ಇದೆ. ಈ ಮೊದಲು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ. ಭಯೋತ್ಪಾದನೆ ನಡೆದ್ರು ಸೌಮ್ಯವಾಗಿ ನಡೆದುಕೊಳ್ತಿದ್ವಿ.
ಈ ಬಾರಿ ಮೊದಲ ದಿವಸವೇ 9ಕ್ಕೂ ಹೆಚ್ಚಿನ ಲಾಚಿಂಗ್ ಪ್ಯಾಡ್ ಮೇಲೆ ನಮ್ಮವರು ಅಟ್ಯಾಕ್ ಮಾಡಿದ್ದಾರೆ. ಅವರ ಅಡಗು ತಾಣಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸಂತಸ, ಟೀಕೆ ಮಾಡುವವರ ಬಗ್ಗೆ ಹೇಳೋದಿಲ್ಲ. ನರೇಂದ್ರ ಮೋದಿ ಬಂದ ನಂತರವೆ ದೇಶದಲ್ಲಿ ನಡೆಯುವ ಭಯೋತ್ಪಾದನೆ ಚುಟುವಟಿಕೆ ನಿಂತು ಬಾರ್ಡರ್ ಗೆ ಸೀಮಿತ ಆಗಿದೆ.
ಭಾರತ ಸರ್ಕಾರ, ಮಿಲಿಟರಿಗೆ ಅದರದ್ದೇ ಆದ ತಂತ್ರಗಳು ಇರುತ್ತೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧ ಪಟ್ಟ ಎಲ್ಲಾ ವಿಷಯಗಳನ್ನು ವಿದೇಶಾಂಗ ವಕ್ತಾರರು ತಿಳಿಸುತ್ತಾರೆ ಎಂದರು.
ಟ್ರಂಪ್ ಮಧ್ಯಸ್ತಿಕೆ ವಿಚಾರ
ಪಾಕಿಸ್ತಾನದ ಡಿಜಿಎಂ ನೇರವಾಗಿ ಭಾರತಕ್ಕೆ ಮಾತನಾಡಿದ್ದಾರೆ ಅನ್ನೋ ವರದಿ ಬಂದಿದೆ. ಮುಂದಿನ ವಿಷಯ ಸಂಬಂಧ ಪಟ್ಟವರು ತಿಳಿಸುತ್ತಾರೆ ಇದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ.ವಿದೇಶಾಂಗ ಮಂತ್ರಿ ಈ ಬಗ್ಗೆ ಮಾಹಿತಿ ಕೊಡ್ತಾರೆ ಎಂದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ