ಬೆಳಗಾವಿ : ಯೂತ್ ಫಾರ್ ಸೇವಾ ಸಂಸ್ಥೆಯಿಂದ ಸೇವಾ ಸಂಭ್ರಮ ಕಾರ್ಯಕ್ರಮ….. ಸ್ವಯಂಸೇವಕರಿಗೆ ಪ್ರಮಾಣ ಪತ್ರ ವಿತರಣೆ…
ಬೆಳಗಾವಿಯ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಭಾನುವಾರ ಸೇವಾ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿ ಸ್ವಯಂಸೇವಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಸೇನಾಧಿಕಾರಿ ಕರ್ನಲ್ ದೀಪಕ್ ಕುಮಾರ ಗುರಂಗ್ ಅವರು ಮಾತನಾಡಿ, ಇತೀಚಿನ ದಿನಗಳಲ್ಲಿ ಯುವಕರಲ್ಲಿ ಸೇವಾ ಮನೋಭಾವನೆ ಕಡಿಮೆಯಾಗುತ್ತಿದೆ. ಆದರೆ ಯೂತ್ ಫಾರ್ ಸೇವಾ ಸಂಸ್ಥೆಯು ಯುವ ಜನಾಂಗದಲ್ಲಿ ಸೇವಾಮನೋಭಾವ ಬೆಳೆಸುವ ಜೊತೆಗೆ ಅವರ ವಯಕ್ತಿಕ ಬೆಳವಣಿಗೆಗೆ ಒತ್ತು ಕೊಡುತ್ತಿದೆ ಹಾಗೂ ಸ್ವಯಂ ಸೇವಕರ ಮೂಲಕ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು,
ಖ್ಯಾತ ಉದ್ಯಮಿ ಲಿಂಗರಾಜ ಜಗಜಂಪಿ ಮಾತನಾಡಿ, ಈಗಿನ ಯುವಕರು ಮನರಂಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಆದರೆ ಯೂತ್ ಫಾರ್ ಸೇವಾ ಸ್ವಯಂ ಸೇವಕರು ಸೇವೆ ಮಾಡುತ್ತಿರುವುದನ್ನು ಕಂಡು ಅವರು ಹರ್ಷ ವ್ಯಕ್ತಪಡಿಸಿದರು.
ಜೈ ಭಾರತ ಫೌಂಡೇಶನದ ಬಸನಗೌಡ ಪಾಟೀಲ ಅವರು ಸ್ವಯಂ ಸೇವಕರ ಸೇವೆ ಹೀಗೆ ಮುಂದುವರಿಯಲಿ ನಿಮಗೆ ನಮ್ಮ ಸಂಸ್ಥೆಯಿಂದ ಯಾವುದೇ ತರಹದ ಸಹಾಯ ಬೇಕಿದ್ದರೂ ನೀಡಲು ನಾವು ಸದಾ ಸಿದ್ದ ಎಂದು ಹೇಳಿದರು. ಡಾ. ಜ್ಯೋತಿ ಕವಳೇಕರ ಸ್ವಯಂ ಸೇವಕರು ಏಕೆ ಸೇವೆ ಮಾಡಬೇಕು ಅವರಿಗೆ ಸೇವೆ ಮಾಡುವುದರಿಂದ ಸಿಗುವ ಅವಕಾಶಗಳೇನು ಎಂದು ತಿಳಿಸಿದರು, ನೀತಾ ಗಂಗಾರಡ್ಡಿ ಯೂತ್ ಫಾರ್ ಸೇವಾ ಸಂಸ್ಥೆಯ ಚಟುವಟಿಕೆಗಳ ವರದಿ ನೀಡಿದರು.
ಜಿಲ್ಲಾ ಸಾಯೋಜಕರಾದ ಸಂತೋಷ ಖೋತ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ಮತ್ತು ಪ್ರಶಸ್ತಿಗಳ ವಿತರಣೆ ನಡೆಸಿಕೊಟ್ಟರು ಹಾಗು ಕುಮಾರಿ ಸಮೃದ್ಧಿ ಜೈನ್ ಹಾಗೂ ವಿಜೇತ ನಿರೂಪಣೆ ಮಾಡಿದರು ಅಂಕಿತಾ ವಂದಿಸಿದರು ಈ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾದ ಹರೀಶ, ಮಹೇಶ, ಸಮೀಕ್ಷಾ, ವೀಣಾ, ಯಲಪ್ಪ, ಮುರುಳಿ, ಅನೀಶ್, ಸಾಗರ, ಆರತಿ ಇತರರಿದ್ದರು ಒಟ್ಟು 95 ಜನ ಸ್ವಯಂ ಸೇವಕರಿಗೆ ಪ್ರಶಸ್ತಿಯನ್ನು ನೀಡಲಾಯಿತು.
Laxmi News 24×7