ವಿವಿಡ ಮಾಂಟೆಸ್ಸರಿ ಮತ್ತು ಪ್ರಾಥಮಿಕ ಶಾಲೆಯ ಯಶಸ್ವಿ ಪಯಣ…
ಬೆಳಗಾವಿಯ ಬಾಳೇಕುಂದ್ರಿ ಕೆ.ಎಚ್.ನಲ್ಲಿ ಹೊಸ ಶಾಖೆ ಆರಂಭ
ಬೆಳಗಾವಿಯ ಚಿಣ್ಣರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಜನ ಮೆಚ್ಚುಗೆಗೆ ಪಾತ್ರವಾಗಿರುವ ವಿವಿಡ ಮಾಂಟೆಸ್ಸರಿ ಮತ್ತು ಪ್ರಾಥಮಿಕ ಶಾಲೆಯೂ ಯಶಸ್ವಿಯಾಗಿ ದಾಪುಗಲನ್ನು ಇರಿಸುತ್ತ ಇಂದು ತನ್ನ ಎರಡನೇ ಶಾಖೆಯನ್ನು ಆರಂಭಿಸಿದೆ. ಹೌದು, ಬೆಳಗಾವಿಯ ಚಿಣ್ಣರಿಗೆ ಆಂಗ್ಲ ಭಾಷೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಲ್ಲಿರುವ ವಿವಿಧ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸುತ್ತ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ವಿವಿಡ ಮಾಂಟೆಸ್ಸರಿ ಮತ್ತು ಪ್ರಾಥಮಿಕ ಶಾಲೆಯೂ ಯಶಸ್ವಿಯಾಗಿ ದಾಪುಗಲನ್ನು ಇರಿಸುತ್ತ ಇಂದು ತನ್ನ ಎರಡನೇ ಶಾಖೆಯನ್ನು ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಆರಂಭಿಸಿದೆ.
ಇಂದು ಶಾಲೆಯ ಸಂಸ್ಥಾಪಕಿ ಮತ್ತು ಚೇರ್’ಮನ್ ಆಗಿರುವ ರೋಹಿನಾ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೇಹೇದಿ ಶಾರೂಕ್ ಜಾರೆ, ಇವೆಂಟ್ ಕಾಂಟ್ರ್ಯಾಕ್ಟರ್ ಫತ್ತೇ ಅಹಮದ್ ಸಾಬ್’ಖಾನ್ ಹಾಗೂ ತನವೀರ್ ಇನಾಮ್’ದಾರ್ ಸೇರಿದಂತೆ ಶಾಲೆಯ ವಿದ್ಯಾರ್ಥಿ ಶಾರೋನ್ ರಾಜು ಸಿಟ್ಟೇಮ್ ಎಂಬ ವಿದ್ಯಾರ್ಥಿಯ ಹಸ್ತದಿಂದ ದೀಪ ಬೆಳಗಿಸುವ ಮೂಲಕ ವಿವಿಡ ಮಾಂಟೆಸ್ಸರಿ ಮತ್ತು ಪ್ರಾಥಮಿಕ ಶಾಲೆಯ ಬಾಳೇಕುಂದ್ರಿ ಕೆ.ಎಚ್. ಶಾಖೆಯನ್ನ ವಿಜೃಂಭಣೆಯಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಶಿಕ್ಷಕಿ ಸ್ವಾತಿ ಜಾಧವ ಅವರು, ಹೆಸರೇ ಸೂಚಿಸುವಂತೆ ವಿವಿಡ ಮೊಂಟೆಸ್ಸರಿಯೂ ಶಿಕ್ಷಣದೊಂದಿಗೆ ಮಕ್ಕಳಿಗೆ ವಿವಿಧ ಕಲಾಪ್ರತಿಭೆಗಳ ಅನಾವರಣಕ್ಕೆ ಒಂದು ವೇದಿಕೆಯಾಗಿದೆ. 2004 ರಿಂದ ನಮ್ಮ ಶಾಲೆಯೂ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಈಗ 2ನೇ ಶಾಖೆಯನ್ನು ಬಾಳೇಕುಂದ್ರಿಯಲ್ಲಿ ಆರಂಭಿಸಿದೆ. ಪ್ರಾವಿನ್ಯತೆಯುಳ್ಳ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಅಲ್ಲದೇ ಹಲವಾರು ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದರು.
ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ವಿವಿಡ ಮಾಂಟೆಸ್ಸರಿ ಮತ್ತು ಪ್ರಾಥಮಿಕ ಶಾಲೆಯೂ ಹೊಸ ಶಾಖೆಯನ್ನು ಶಾಲೆಯೂ ಆರಂಭಿಸಿದೆ. ಮಕ್ಕಳ ಕಲಿಕೆಗೆ ಮತ್ತು ಬೆಳವಣಿಗೆಗೆ ಪೂರಕವಾದ ಸುಂದರ ವಾತಾವರಣವನ್ನು ಶಾಲೆಯೂ ನಿರ್ಮಿಸಿದೆ. ನಮ್ಮ ಮಕ್ಕಳಿಗೆ ಇಲ್ಲಿ ಒಳ್ಳೆಯ ವಾತಾವರಣದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಶಿಕ್ಷಕರು ಮತ್ತು ಸಿಬ್ಬಂದಿಗಳು ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ ಎಂದು ಫಾತಿಮಾ ಮತ್ತು ಇನ್ನುಳಿದ ಪಾಲಕರು ತಿಳಿಸಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಅತ್ಯವಶ್ಯ. ಇಂದು ಈ ಶಾಲೆಯೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡುತ್ತಿದೆ ಎಂದು ಪಾಸ್ಟರ್ ವಿಜಯಕುಮಾರ್ ಬಾಳೇಕುಂದ್ರಿ ತಿಳಿಸಿದರು.
ಬಾಳೇಕುಂದ್ರಿ ಗ್ರಾಮದಲ್ಲೇ ವಿವಿಡ ಮೊಂಟೆಸ್ಸರಿ ಆರಂಭಿಸಿರುವುದು ಪಾಲಕರಿಗೆ ಒಳ್ಳೆಯದಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ, ವಿವಿಧ ಚಟುವಟಿಕೆಗಳು, ಬೋಧನೆ, ಬೋಧಕರು, ಸಿಬ್ಬಂದಿ ಎಲ್ಲವು ಒಳ್ಳೆಯದಾಗಿದೆ. ಜನರಿಂದಲೂ ಈ ಶಾಲೆಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದ್ದು, ನಮ್ಮ ಮಕ್ಕಳನ್ನು ಇದೇ ಶಾಲೆಯಲ್ಲಿ ದಾಖಲಿಸಿರುವುದಾಗಿ ಪಾಲಕರಾದ ಸೋನು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7