ಬಾಗಲಕೋಟೆ : ನಗರದ ಹೊರವಲಯದ ಸೀಮೀಕೇರಿ ಬೈಪಾಸ್ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದರಿಂದಾಗಿ ಮೂವರು ಮೃತಪಟ್ಟಿದ್ದಾರೆ.
ಸಿದ್ದು (16), ಸಂತೋಷ (16) ಮತ್ತು ಕಾಮಣ್ಣ (16) ಮೃತ ದುರ್ದೈವಿಗಳು. ಮೃತರು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು. ಮೂವರು ಬೈಕ್ ಮೇಲೆ ತೆರಳುವಾಗ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಮೃತರೆಲ್ಲರೂ ಮರನಾಳ ಗ್ರಾಮದವರು ಎಂಬುದಾಗಿ ತಿಳಿದು ಬಂದಿದೆ.ಅಪಘಾತದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7