Breaking News

ಭಾರತ ಪಾಕಿಸ್ತಾನ ನಡುವೆ ಯದ್ಧದ ಪ್ರಸಂಗ ಎದುರಾದರೇ… ಯುದ್ಧಕ್ಕೆ ನಾವು ರೆಡಿ ಎಂದ ಬೆಳಗಾವಿಯ ಮಾಜಿ ಸೈನಿಕರು..!!!

Spread the love

ಭಾರತ ಪಾಕಿಸ್ತಾನ ನಡುವೆ ಯದ್ಧದ ಪ್ರಸಂಗ ಎದುರಾದರೇ…
ಯುದ್ಧಕ್ಕೆ ನಾವು ರೆಡಿ ಎಂದ ಬೆಳಗಾವಿಯ ಮಾಜಿ ಸೈನಿಕರು..!!!
ಭಾರತ ಪಾಕಿಸ್ತಾನ ನಡುವೆ ಯದ್ಧದ ಪ್ರಸಂಗ ಎದುರಾದರೆ ನಾವು ಯುದ್ಧ ಮಾಡಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಾಗಿದ್ದೇವೆಂದು ಬೆಳಗಾವಿಯ ಮಾಜಿ ಸೈನಿಕ ಸಂಘನೆಯ ಜಿಲ್ಲಾಧ್ಯಕ್ಷ ಜಗದೀಶ ಪುಜಾರಿ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ 36 ಸಾವಿರ ಮಾಜಿ ಸೈನಿಕರಿದ್ದಾರೆ. ಭಾರತದ ಗಡಿಯ ಕಾಯ್ದು ನಿವೃತ್ತಿ ಹೊಂದಿರೋ ಸೈನಿಕರು ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ.
ಭಾರತೀಯ ಸೇನೆಯಲ್ಲಿಯೇ ಪ್ರಸ್ತುತಾಗಿ 17 ಸಾವಿರಕ್ಕೂ ಅಧಿಕ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ. ದೇಶಕ್ಕೆ ಅತಿಹೆಚ್ಚು ಸೈನಿಕರನ್ನ ಕೊಟ್ಟ ಕೀರ್ತಿ ಇಡೀ ಕರ್ನಾಟಕದಲ್ಲೇ ಬೆಳಗಾವಿಗೆ ಸಲ್ಲುತ್ತದೆ ಎಂದರು.
ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಪಾಕಿಸ್ತಾನ ಕುತಂತ್ರ ಮಾಡುತ್ತಿದೆ. ನಾವೆಲ್ಲರೂ ಭಾರತ ಭೂಮಾತೆಯನ್ನ ಪೂಜಿಸುತ್ತೇವೆ, ಆರಾಧಿಸುತ್ತೇವೆ . ಭಾರತಕ್ಕೆ ಗಂಡಾಂತರ ಎದುರಾದರೆ ನಾವೆಲ್ಲರೂ ಈಗಾಲೂ ಯುದ್ಧಕ್ಕೆ ಸಿದ್ಧವಾಗಿದ್ದೇವೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಲು ನಾವು ಮತ್ತು ನಮ್ಮ ಸೈನ್ಯ ಸನ್ನದ್ಧವಾಗಿದೆ. ಭಾರತ ಪಾಕಿಸ್ತಾನ ನಡುವೆ ಯದ್ಧದ ಪ್ರಸಂಗ ಎದುರಾದರೆ ನಾವು ಯುದ್ಧ ಮಾಡಲು ಸಿದ್ಧ ಎಂದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ