ಬೆಳಗಾವಿಯಲ್ಲಿ ಬಸವಜಯಂತಿ; ಚಿನ್ನದ ಉದ್ಯಮಿಯಿಂದ ಪಂಚಲೋಹದ ಕೊಡಂಚು ಉಡುಗೊರೆ!
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಗ್ರಾಮೀಣ ಪ್ರದೇಶದ ರೈತ ಕುಟುಂಬ ಎತ್ತಿನ ಜೋಡಿಗಳಿಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಬಂಗಾರದ ಉದ್ಯಮಿ ಪಂಚಲೋಹದ ಬೆಳ್ಳಿಯ ಕೊಡಂಚು ಉಡುಗೊರೆಯಾಗಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಹಾಗೂ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಪ್ರಯುಕ್ತ ಎತ್ತುಗಳ ಭವ್ಯ ಮೆರವಣಿಗೆ ನಡೆಯಿತು. ಇದಕ್ಕೂ ಮುಂಚೆ ರೈತರು ತಮ್ಮ ತಮ್ಮ ಎತ್ತುಗಳಿಗೆ ಎತ್ತಿನ ಬಂಡೆಗಳನ್ನು ಅಲಂಕರಿಸಿ ಮೆರವಣಿಗೆ ಸಜ್ಜುಗೊಳಿಸಿ ಭವ್ಯ ಮೆರವಣಿಗೆ ನಡೆಸಿದ್ದಾರೆ.
ಇನ್ನೂ ದೇಶಕ್ಕೆ ಅನ್ನ ನೀಡುತ್ತಿರೋ ಬಸವಣ್ಣನ ಜಯಂತಿ ಅಂಗವಾಗಿ ಚಿನ್ನದ ಉದ್ಯಮಿ ಸುನೀಲ ವರ್ಣೇಕರ್ ಎಂಬುವವರು ಸಾಮಾಜಿಕ ಸೇವೆ ಸಲ್ಲಿಸಿದ್ದು 150ಕ್ಕೂ ಅಧಿಕ ಎತ್ತಿನ ಜೋಡಿಗಳಿಗೆ ಪಂಚಲೋಹದ ಕೊಡಂಚು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇಅಲ್ಲದೇ ಚಿನ್ನದ ಉದ್ಯಮಿಯಾಗಿರುವ ಸುನೀಲ ವರ್ಣೇಕರ್ ಸಾಮಾಜಿಕ ಸೇವೆಯಲ್ಲೂ ಸೈ ಎಂದಿದ್ದು ಸದಾವೊಂದಿಲೊಂದು ಸಾಮಾಜಿಕ ಕಾರ್ಯಗಳ ಮೂಲಕ ಹೆಸರು ಮಾಡಿರುವ ಚಿನ್ನದ ಉದ್ಯಮಿ ಸುನೀಲ ಭೂಮಿಯ ಒಡೆಯ ರೈತನಿಗೆ ಹಸಿರುಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಬಳಿಕ ಬೆಳ್ಳಿ ಸೇರಿದಂತೆ ಇತರ ಲೋಹಗಳನ್ನು ಬಳಸಿ ತಯಾರಿಸಿದ ಪಂಚಲೋಹದ ಕೊಡಂಚು ಉಡುಗೊರೆ ನೀಡಿದ್ದಾರೆ.ಕಾರ್ಯಕ್ರಮದಲ್ಲಿ ಅರ್ಜುನ ಕೆಂಪನ್ನವರ,ಶಿವಾನಂದ ಭೋಜಯ್ಯನವರ,ಸಚೀನ ಹುಂಬಿ, ಸಂಗಪ್ಪ ಬಾಗೇವಾಡಿ,ಪ್ರವೀಣ ಬಾಗೇವಾಡಿ,ವಿರೇಶ ಗುಡ್ಡದಮಠ,ಮಂಜುನಾಥ ಖನ್ನಪ್ಪನವರ,ಬಾಬಣ್ಣ ಖಂಡೋಜಿ,ಅನಿಲ ಕರಿಕಟ್ಟಿ ಸೇರಿ ಗ್ರಾಮಸ್ಥರು ಭಾಗಿಯಾಗಿದ್ದರು.
Laxmi News 24×7