ದಾವಣಗೆರೆ: ವಕ್ಫ್ ಮಸೂದೆ ವಿರೋಧಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದ ಮೇಲೆ ಕಬೀರ್ ಖಾನ್ ಎಂಬವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸರ್ಕಾರ ವಕ್ಫ್ ಮಸೂದೆ ಮಂಡನೆ ಮಾಡಿದ ಬೆನ್ನಲ್ಲೇ ಕಬೀರ್ ಖಾನ್ ನೀಡಿದ್ದ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ ಬಳಿಕ ಪ್ರಕಣದ ಪ್ರಮುಖ ಆರೋಪಿ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಕಬೀರ್ ಖಾನ್ ನಾಪತ್ತೆಯಾಗಿದ್ದರು. ದಾವಣಗೆರೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಕಳೆದ ಎರಡು ದಿನಗಳ ಹಿಂದೆ ಇದೇ ಪ್ರಕರಣದಲ್ಲಿ ಸಹಕರಿಸಿದ ಆರೋಪಿಗಳಾದ ಅಬ್ದುಲ್ ಗನಿ (56) ಹಾಗೂ ಮೊಹಮ್ಮದ್ ಜುಬೇರ್ (40) ಅವರನ್ನು ಬಂಧಿಸಲಾಗಿತ್ತು. ಇದೀಗ ರಾಜಸ್ಥಾನದ ಅಜ್ಮೇರ್ನಲ್ಲಿ ಕಬೀರ್ ಖಾನ್ ಅವರನ್ನು ಬಂಧಿಸಿ ದಾವಣಗೆರೆ ಕರೆತಂದಿದ್ದಾರೆ.
ದಾವಣಗೆರೆ ನಗರ ಡಿವೈಎಸ್ಪಿ ಶರಣಬಸವೇಶ್ವರ ಹಾಗೂ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
Laxmi News 24×7