Breaking News

ಶಿರಸಿಯ ಅವಳಿ ಮಕ್ಕಳಿಗೆ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಫಲಿತಾಂಶ

Spread the love

ಶಿರಸಿ: ಎರಡು ದಿನಗಳ ಹಿಂದೆಯಷ್ಟೇ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಎಲ್ಲೆಡೆ ರ‍್ಯಾಂಕ್​ಗಳ ಚರ್ಚೆ ನಡೆದಿದೆ. ಅದರ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ವೈದ್ಯ ದಂಪತಿಯ ಅವಳಿ ಮಕ್ಕಳು ಇಬ್ಬರೂ ರಾಜ್ಯಮಟ್ಟದಲ್ಲಿ ಆರನೇ ರ‍್ಯಾಂಕ್​ ಪಡೆದು ಸಹೋದರತೆ ಸಾರಿದ್ದಾರೆ.

ಶಿರಸಿಯ ವೈದ್ಯ ದಂಪತಿ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಮಕ್ಕಳಿಬ್ಬರೂ ಪಿಯುಸಿಯಲ್ಲಿ ರಾಜ್ಯಮಟ್ಟದ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. 600ಕ್ಕೆ 594 ಅಂಕ ಪಡೆದು ಶೇ.99 ರಷ್ಟು ಸಾಧನೆ ಮಾಡಿದ ವಿದ್ಯಾರ್ಥಿಗಳಾದ ದಕ್ಷ ಹಾಗೂ‌ ರಕ್ಷಾ ಇಬ್ಬರೂ ಸಮಾನ ಸಂಖ್ಯೆಯ ಅಂಕ‌ ಪಡೆದಿರುವುದು ವಿಶೇಷವಾಗಿದೆ.ಮೂಲತಃ ಶಿರಸಿಯವರಾದರೂ ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ‌ ದೀಕ್ಷಾ ಕಾಲೇಜಿನಲ್ಲಿ ಓದುತ್ತಿದ್ದರು. ದಕ್ಷನಿಗೆ ನಾಲ್ಕು ವಿಷಯದಲ್ಲಿ ಶೇ.100, ರಕ್ಷಾನಿಗೆ ಎರಡು ವಿಷಯದಲ್ಲಿ ಶೇ. 100 ಅಂಕ ಪಡೆದಿದ್ದಾರೆ. ಆದರೂ ಇಬ್ಬರೂ ಒಂದೇ ರೀತಿಯ ಅಂಕ ಗಳಿಸಿದ್ದು ವಿಸ್ಮಯ ಎನ್ನ ಬಹುದಾಗಿದೆ.‌


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ